ದೇಶಾದ್ಯಂತ ಇದೇ 16ರಂದು ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿ, ಕೋವಿಡ್-19 ಸ್ಥಿತಿಗತಿ ಹಾಗೂ ಕೋವಿಡ್ ಲಸಿಕೆ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿರುವ ಸಿದ್ಧತೆಯ ಪರಿಶೀಲನೆ ನಡೆಸಿದರು. ಈ ಮಹತ್ವದ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ನಾನಾ ಇಲಾಖೆಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಆರೋಗ್ಯ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದ್ದು, ಇವು ಸಂಪೂರ್ಣ ಸುರಕ್ಷಿತ ಮತ್ತು ಸೋಂಕು ನಿಯಂತ್ರಣ ಶಕ್ತಿ ಹೊಂದಿವೆ ಎಂದು ಸಭೆ ಅನುಮೋದಿಸಿದೆ. ಕೋವಿಡ್-19 ಲಸಿಕೆ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಡೆಸಿರುವ ಸಿದ್ಧತೆ ಕುರಿತು ಸಮಾಲೋಚನೆ ನಡೆಸಿದ ಪ್ರಧಾನಂತ್ರಿ ಅವರು, ಜನರ ಪಾಲ್ಗೊಳ್ಳುವಿಕೆ, ಚುನಾವಣಾ ಅನುಭವದ ಬಳಕೆ ಮತ್ತು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ತತ್ವಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇಶಾದ್ಯಂತ ಸುಮಾರು 3 ಕೋಟಿ ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಎರಡನೇ ಹಂತದಲ್ಲಿ 50 ವರ್ಷ ದಾಟಿದವರಿಗೆ ಸೋಂಕಿತರಿಗೆ ಮತ್ತು ಮೂರನೇ ಹಂತದಲ್ಲಿ 50 ವರ್ಷದೊಳಗಿನ ಗುಂಪುಗಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಕೋ-ವಿನ್ ಲಸಿಕಾ ವಿತರಣೆ ನಿರ್ವಹಣೆ ವ್ಯವಸ್ಥೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು ಈಗಾಗಲೇ 79 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳು ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
Related Articles
ಪಾಕ್ ಮತಾಂಧರಿಗೆ ಪೊಲಿಯೋ ಲಸಿಕೆಯೂ ಬೇಡ, ಕೋವಿಡ್ ಲಸಿಕೆಗೂ ಅಡ್ಡಗಾಲು : ಬಡವರಿಲ್ಲಿ ಹೈರಾಣ
December 30, 2020
Varta Mitra News - SP
ರಾಷ್ಟ್ರೀಯ, ಆರೋಗ್ಯ, ಅಂತರರಾಷ್ಟ್ರೀಯ
Comments Off on ಪಾಕ್ ಮತಾಂಧರಿಗೆ ಪೊಲಿಯೋ ಲಸಿಕೆಯೂ ಬೇಡ, ಕೋವಿಡ್ ಲಸಿಕೆಗೂ ಅಡ್ಡಗಾಲು : ಬಡವರಿಲ್ಲಿ ಹೈರಾಣ
Seen By: 86 ಡರ್ ಮಾಂಗಿ , ಪಾಕಿಸ್ಥಾನ : ಮತಾಂಧರ ದೃಷ್ಟಿ ಸದಾ ಪೀತ. ಒಳ್ಳೆಯ ವಿಚಾರಗಳೂ ಇವರಿಗೆ ಕೆಟ್ಟದಾಗೇ ಗೋಚರಿಸುವುದು. ಮಾರಕ ಕೋವಿಡ್ ಲಕ್ಷಾಂತರ [more]
ದೇಶದ ಮೊದಲ ಕೋವಿಡ್ ಸೋಂಕಿತೆಗೆ ಇದೀಗ ಮತ್ತೆ ಕೊರೋನಾ ಸೋಂಕು
July 13, 2021
Varta Mitra News - SP
ರಾಷ್ಟ್ರೀಯ
Comments Off on ದೇಶದ ಮೊದಲ ಕೋವಿಡ್ ಸೋಂಕಿತೆಗೆ ಇದೀಗ ಮತ್ತೆ ಕೊರೋನಾ ಸೋಂಕು
Seen By: 60 ತ್ರಿಶೂರು: ದೇಶದ ಮೊದಲ ಕೊರೋನಾ ಸೋಂಕಿತೆ ಎಂದು ಗುರುತಿಸಿಕೊಂಡಿರುವ ವೈದ್ಯಕೀಯ ವಿದ್ಯಾರ್ಥಿನಿಯಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದಾಗಿ ಕೇರಳದ ಆರೋಗ್ಯ ಇಲಾಖೆ ಮಂಗಳವಾರ [more]
ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ
December 5, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ, ಆರೋಗ್ಯ
Comments Off on ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ
Seen By: 62 ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ, ವಿಶ್ವದ ಔಷದಾಲಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಲಸಿಕೆಗಳ ಸಂಶೋಧನೆಯಲ್ಲಿ ಭಾರತ ಇಡೀ ವಿಶ್ವದಲ್ಲಿ ಮುಂಚೂಣಿಯಲ್ಲಿ [more]