ಹೊಸದಿಲ್ಲಿ :ಗೋ-ಸಂತತಿಯ ಪಾಲನೆ, ಸಂರಕ್ಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡುವುದಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.) ವನ್ನು ಭಾರತ ಸರ್ಕಾರ ರೂಪಿಸಿದೆ. ಸಣ್ಣ ಮತ್ತು ಮಧ್ಯಮ ರೈತರು, ಮಹಿಳೆಯರು ಮತ್ತು ಯುವ ವ್ಯವಹಾರಿಕೋದ್ಯಮಿಗಳಿಗೆ ಜೀವನೋಪಾಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ನೀತಿಗಳನ್ನು ರೂಪಿಸಲು ಮತ್ತು ಗೋ ಸಂತತಿಗೆ ಸಂಬಂಸಿದ ಯೋಜನೆಗಳ ಅನುಷ್ಠಾನಕ್ಕೆ ನಿರ್ದೇಶನಗಳನ್ನು ನೀಡುವಲ್ಲಿ ಇದು ಮಹತ್ವದ ಕಾರ್ಯವೆಸಗುತ್ತಿದೆ.
ಹಸು ಕೇವಲ ಹಾಲು ನೀಡುವ ಪ್ರಾಣಿಯಲ್ಲ ಆದರೆ ಸರಿಯಾಗಿ ಬಳಸಿದರೆ ಅದರ ಪರಿಸರ, ಆರೋಗ್ಯ ಮತ್ತು ಆರ್ಥಿಕ ಪ್ರಯೋಜನಗಳು ಮನುಕುಲಕ್ಕೆ ಅಪಾರ ಎಂಬ ಸಂದೇಶವನ್ನು ದೇಶಾದ್ಯಂತ ತಲುಪಿಸುವಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.) ಯಶಸ್ವಿಯಾಗಿದೆ.
ದೇಶಾದ್ಯಂತದ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಮಧೇನು ಪೀಠ ಅಥವಾ ಕಾಮಧೇನು ಅಧ್ಯಯನ ಕೇಂದ್ರ ಅಥವಾ ಕಾಮಧೇನು ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಆಯೋಗದ ಚಿಂತನೆಯೂ ಈಗ ಗಮನ ಸೆಳೆದಿದೆ.
ಯುವ ವಿದ್ಯಾರ್ಥಿಗಳು ಮತ್ತು ಇತರ ಎಲ್ಲ ನಾಗರಿಕರಲ್ಲಿ ಸ್ಥಳೀಯ ಗೋಸಂತತಿಯ ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸಲು, ಗೋ ವಿಜ್ಞಾನದ ಬಗ್ಗೆ ಅಧ್ಯಯನ ಸಾಮಗ್ರಿಗಳು ಲಭ್ಯವಾಗುವಂತೆ ಮಾಡುವ ಮತ್ತು ಕಾಮಧೇನು ಗೌ ವಿಜ್ಞಾನ್ ಪರೀಕ್ಷೆಯನ್ನು ನಡೆಸುವ ಉದಾತ್ತ ಹಾಗೂ ನೂತನ ಉಪಕ್ರಮವೊಂದನ್ನು ಆಯೋಗ ಆರಂಭಿಸಿದೆ.
ಕಾಮಧೇನು ಗೋ – ವಿಜ್ಞಾನ ಪರೀಕ್ಷೆಯು ಒಂದೇ ದಿನ ದೇಶಾದ್ಯಂತ ನಡೆಸಲಾಗುವ ಅಂತರ್ಜಾಲ(ಆನ್ಲೈನ್) ಪರೀಕ್ಷೆಯಾಗಿದೆ. ಈ ಪರೀಕ್ಷೆಯ ಉದ್ದೇಶಿತ ದಿನಾಂಕವನ್ನು ನಮ್ಮ ಅಕೃತ ಜಾಲತಾಣಗಳಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುವುದು.
*ಪರೀಕ್ಷೆಯನ್ನು ಪ್ರಧಾನವಾಗಿ ನಾಲ್ಕು ವಿಭಾಗಗಳಲ್ಲಿ ನಡೆಸಲಾಗುವುದು
(1) ಪ್ರಾಥಮಿಕ ಹಂತ ( 8 ನೇ ತರಗತಿಯವರೆಗೆ) (2) ದ್ವಿತೀಯ ಹಂತ (9 ನೇ ತರಗತಿಯಿಂದ 12 ನೇ ತರಗತಿಯವರೆಗೆ) (3) ಕಾಲೇಜು ಹಂತ (12 ನೇ + ನಂತರ) (4) ಸಾರ್ವಜನಿಕರಿಗೆ ( ವಯಸ್ಸು ಮುಕ್ತ)
*ಕಾಮಧೇನು ಗೋ – ವಿಜ್ಞಾನ ಪರೀಕ್ಷೆಯು 100 ಅಂಕಗಳು ಮತ್ತು ಒಂದು ಗಂಟೆ ಅವಯನ್ನು ಹೊಂದಿರುತ್ತದೆ . ಇದು ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಇತರ 11 ಪ್ರಾದೇಶಿಕ ಭಾಷೆಗಳಲ್ಲಿರುತ್ತದೆ.
*ಪರೀಕ್ಷೆಗೆ ಯಾವುದೇ ಶುಲ್ಕವಿಲ್ಲ.*ಪರೀಕ್ಷೆಯು ಟಿಕ್-ಮಾರ್ಕ್ / ವಸ್ತುನಿಷ್ಠ/ವಸ್ತುಆಧಾರಿತ ( ಆಬ್ಜೆಕ್ಟಿವ್ ) ರೀತಿಯ ಪ್ರಶ್ನೆ-ಉತ್ತರಗಳು (ಎಂ.ಸಿ.ಕ್ಯೂ.) ಆಗಿರುತ್ತದೆ.
*ರಾಷ್ಟ್ರೀಯ ಕಾಮಧೇನು ಆಯೋಗ ಜಾಲತಾಣಗಳಲ್ಲಿ ಪಠ್ಯಕ್ರಮ ಪ್ರಕಟಿಸಲಾಗುವುದು.
ಫಲಿತಾಂಶಗಳನ್ನು ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.)ದ ಜಾಲತಾಣಗಳಲ್ಲಿ ತಕ್ಷಣ ಘೋಷಿಸಲಾಗುತ್ತದೆ.ಸೂಕ್ತ ಬಹುಮಾನಗಳಲ್ಲದೆ, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು.
ಈ ಕಾರ್ಯಕ್ರಮವನ್ನು ಭರ್ಜರಿ ಯಶಸ್ಸಿಗೆ ತರಲು, ಕೇಂದ್ರ ಶಿಕ್ಷಣ ಸಚಿವರು / ಮುಖ್ಯಮಂತ್ರಿಗಳು / ರಾಜ್ಯ ಶಿಕ್ಷಣ ಮಂತ್ರಿಗಳು / ಎಲ್ಲಾ ರಾಜ್ಯಗಳ ಗೋ ಸೇವಾ ಆಯೋಗಗಳು / ಎಲ್ಲಾ ರಾಜ್ಯಗಳ ಜಿಲ್ಲಾ ಶಿಕ್ಷಣ ಅಕಾರಿಗಳು / ಎಲ್ಲಾ ಶಾಲೆಗಳ ಪ್ರಾಂಶುಪಾಲರು / ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ, ಎನ್.ಜಿ.ಒ.ಗಳು ಮತ್ತು ಗೋದಾನಿಗಳು ಈ ಬೃಹತ್ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ರೈತರು, ಗೋಪಾಲಕರಲ್ಲದೆ ದೇಶದ ಆರ್ಥಿಕತೆಗೂ ಇದು ನೆರವಾಗುವಂತಹ ಯೋಜನೆಯಾಗಿದೆ.ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭಾರ ಭಾರತ / ಸ್ಥಳೀಯ ಭಾರತ / ಹಸಿರು ಭಾರತ / ಡಿಜಿಟಲ್ ಭಾರತ / ಸ್ವಚ್ಛ ಭಾರತ / ಆರೋಗ್ಯ ಭಾರತ/ ಮೇಕ್ ಇನ್ ಇಂಡಿಯಾ ಮುಂತಾದ ಮಹತ್ವಪೂರ್ಣ ಹಾಗೂ ದೂರದರ್ಶಿತ್ವದ ಪರಿಕಲ್ಪನೆಗಳ ಉದ್ದೇಶಗಳನ್ನು ಸಹ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.)ದ ವಿನೂತನ ಕಾಮಧೇನು ಗೋ-ವಿಜ್ಞಾನ ಪರೀಕ್ಷೆಯು ಮೂಡಿಸುವ ಅರಿವು ಮತ್ತು ಉತ್ತೇಜನ ಮೂಲಕ ಪೂರೈಸಲು ನೆರವಾಗುವ ಯೋಜನೆ ಇದಾಗಿದೆ.