ಮುಂಬೈ: ಮಹಾರಾಷ್ಟ್ರ ಪೊಲೀಸ್ ಪಡೆಯನ್ನು ಆಧುನೀಕರಿಸಲು ಹಾಗೂ ನಗರ ಗಸ್ತುಗಳಲ್ಲಿ ಸಿಬ್ಬಂದಿ ದಕ್ಷೆತೆ ಹೆಚ್ಚಿಸಲು ರಾಜ್ಯ ಸರ್ಕಾರ , ಶನಿವಾರ ಮುಂಬೈ ಪೊಲೀಸರಿಗೆ ಗಸ್ತು ತಿರುಗಲು ವಿದ್ಯುತ್ಚಾಲಿತ ದ್ವಿಚಕ್ರವಾಹನ ಸೆಗ್ವೆಗಳನ್ನು ನೀಡಿದೆ.
ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್ ಹಾಗೂ ಪ್ರವಾಸೋದ್ಯಮ ಸಚಿವ ಆದಿತ್ಯಠಾಕ್ರೆ, ಸೆಗ್ವೇ ವಾಹನಗಳನ್ನು ಬಿಡುಗಡೆಗೊಳಿಸಿದ್ದು, ಪೊಲೀಸ್ ಸಿಬ್ಬಂದಿಯನ್ನು ಉತ್ತೇಜಿಸಲು ವಾಹ ನೀಡಿದ್ದು, ಕಾರ್ಯಕ್ರಮದಲ್ಲಿ ನಟ ಅಕ್ಷಯ್ ಕುಮಾರ್ ಕೂಡ ಪಾಲ್ಗೊಂಡಿದ್ದಾರೆ.
ನೂತನವಾಗಿ ಅಭಿವೃದ್ಧಿ ಪಡಿಸಿರುವ ಸೆಗ್ವೆಯಲ್ಲಿ ಡ್ರೋನ್ಗಳನ್ನು ಅಳವಡಿಸಲಾಗಿದ್ದು, ಅವು ಪೊಲೀಸರಿಗೆ ಹೆಚ್ಚಿನ ಭದ್ರತೆ ನೀಡುತ್ತವೆ. ಜತೆಗೆ ಸಾಮಾಜಿಕ ಅಂತರದ ಬಗ್ಗೆಯೂ ವಾಹನದಲ್ಲಿ ಅಳವಡಿಸಿರುವ ತಂತ್ರಜ್ಞಾನ ಎಚ್ಚರಿಕೆ ನೀಡುತ್ತದೆ.
ಇನ್ನು ಮುಂದೆ ಪೊಲೀಸ್ ಸಿಬ್ಬಂದಿ ಇದೇ ದ್ವಿಚಕ್ರ ವಾಹನಗಳ ಮೂಲಕ ನಗರ ಮೇಲ್ವಿಚಾರಣೆ, ಗಸ್ತು ನಡೆಸಲಿದ್ದಾರೆ ಎಂದು ಅಕಾರಿಗಳು ಹೇಳಿದ್ದಾರೆ.