ಡರ್ ಮಾಂಗಿ , ಪಾಕಿಸ್ಥಾನ : ಮತಾಂಧರ ದೃಷ್ಟಿ ಸದಾ ಪೀತ. ಒಳ್ಳೆಯ ವಿಚಾರಗಳೂ ಇವರಿಗೆ ಕೆಟ್ಟದಾಗೇ ಗೋಚರಿಸುವುದು. ಮಾರಕ ಕೋವಿಡ್ ಲಕ್ಷಾಂತರ ಅಮಾಯಕರ ಪ್ರಾಣ ಬಲಿ ತೆಗೆದರೂ ,ತೆಗೆಯುತ್ತಲೇ ಇದ್ದರೂ ಪಾಕಿಸ್ಥಾನದ ಮತಾಂಧರು ಮಾತ್ರ ಈ ವಿಚಾರದಲ್ಲೂ ಕಾಮಾಲೆ ಕಣ್ಣವರು ಅಥವಾ ಇಲ್ಲೂ ಇವರದು ಪೀತ ಚಿಂತನೆ. ಕೋವಿಡ್, ಕೋವಿಡ್ ನಿಯಂತ್ರಕ ವ್ಯಾಕ್ಸಿನ್ ಅಥವಾ ಲಸಿಕೆ ಎಲ್ಲವೂ ಮುಸಲ್ಮಾನ ಸಮುದಾಯವನ್ನು ನಾಶಪಡಿಸುವ ತಂತ್ರದ ಭಾಗವೆಂದೇ ಪ್ರಚಾರ.
ಪೊಲಿಯೋ ಚುಚ್ಚುಮದ್ದಿಗೂ ವಿರೋಧ ಒಡ್ಡಿದ್ದ ಈ ಗುಂಪುಗಳು, ಪೊಲಿಯೋ ವ್ಯಾಕ್ಸಿನ್ ಕೂಡ ಪಾಶ್ಚಾತ್ಯರ ಗೂಢ ತಂತ್ರದ ಫಲಶೃತಿ. ಮುಸ್ಲಿಂ ಮಕ್ಕಳನ್ನು ಗೊಡ್ಡಾಗಿ ಪರಿವರ್ತಿಸುವ ಷಡ್ಯಂತ್ರದಂಗವಾಗಿ ಪಾಶ್ಚಾತ್ಯರು ಪೊಲಿಯೋ ಚುಚ್ಚುಮದ್ದನ್ನು ಸಂಶೋಸಿದರೆಂದು ಪ್ರಚಾರ ನಡೆಸಿದ್ದರು. ಹಾಗಾಗೇ ಪೊಲಿಯೋ ಲಸಿಕೆ ಹಾಕುವ ಅಕಾರಿಗಳು, ಭದ್ರತಾ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರಿಗಿಲ್ಲಿ ನಿರಂತರ ಹಿಂಸೆ. ಇದೇ ಕಾರಣ 2012ರಿಂದ ಇದುವರೆಗೆ ನೂರಕ್ಕೂ ಅಕ ಆರೋಗ್ಯ ಕಾರ್ಯಕರ್ತರು, ವ್ಯಾಕ್ಸಿನೇಟರ್ಗಳು, ಭದ್ರತಾ ಅಕಾರಿಗಳು ಪಾಕಿಸ್ತಾನದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ.
ಲಾಡೇನ್ ಹತ್ಯೆಯಿಂದ
ಶುರುವಾದ ಅಪನಂಬುಗೆ
ಪಾಕಿಸ್ಥಾನದಲ್ಲಿ ಇಂತದ್ದೊಂದು ಅಪನಂಬುಗೆ ಶುರುವಾದ್ದು 2011ರಲ್ಲಿ. ಅಲ್ಖೈದಾದ ಕುಖ್ಯಾತ ಓಸಮಾ ಬಿನ್ ಲಾಡೇನ್ನನ್ನು ಪತ್ತೆ ಹಚ್ಚಲು ಸಿಐಎಯು 2011ರಲ್ಲಿ ನಕಲಿ ಚುಚ್ಚುಮದ್ದು ಕಾರ್ಯಕ್ರಮವೊಂದು ಆಯೋಜಿಸಿತ್ತು. ಈ ಕಾರ್ಯಕ್ರಮವು ಲಾಡೇನ್ ಅಡಗುದಾಣ ಪತ್ತೆಯ ಜೊತೆ ಜೊತೆಗೆ ಆತನ ಸಂಹಾರಕ್ಕೂ ಪೂರಕವಾಯಿತು.ಇದನ್ನೇ ಬಳಸಿಕೊಂಡು ಇಂತಹ ಪ್ರಚಾರ ನಡೆಸಲಾಗಿದೆ ಎನ್ನುತ್ತವೆ ಮೂಲಗಳು.
ಪರಿಣಾಮ, ಜಗತ್ತಿನ ರಾಷ್ಟ್ರಗಳ ಪೈಕಿ ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ನೈಜೀರಿಯಾದಂತಹ ದೇಶಗಳಲ್ಲಿ ಇಂದಿಗೂ ಪೊಲಿಯೋ ನಿಯಂತ್ರಣಕ್ಕೆ ಬಾರದ ವ್ಯಾಯಾಗಿ ಬಿಟ್ಟಿದೆ. ಈ ವರ್ಷ ಅನೇಕ ಪೊಲಿಯೋ ಪ್ರಕರಣಗಳು ಬೆಳಕಿಗೆ ಬಂದಿವೆ. ಕೋವಿಡ್ ಹಾವಳಿಯಿಂದಾಗಿ ಸರಿಯಾಗಿ ಪೊಲಿಯೋ ಲಸಿಕೆ ಶಿಬಿರಗಳು ನಡೆಯದೆ ಮುಖ್ಯವಾಗಿ ಬಡವರ್ಗದ ಜನರು ಅನ್ಯಾಯವಾಗಿ ತತ್ತರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪೊಲಿಯೋ ವ್ಯಾಕ್ಸಿನೇಶನ್ ಅಭಿಯಾನಗಳ ಸಂಚಾಲಕ ಡಾ.ರಾಣಾ ಸಫ್ದರ್.
ಪಾಕಿಸ್ತಾನದ ಡರ್ ಮಾಂಗಿ ಪ್ರದೇಶದಲ್ಲಿ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುತ್ತಿದ್ದ ಆರೋಗ್ಯ ಕಾರ್ಯಕರ್ತ ಅರೀಫುಲ್ಲಾ ಖಾನ್ಗೆ ಮತಾಂಧರು ಗುಂಡು ಹಾರಿಸಿದ್ದಾರೆ. ಇನ್ನೋರ್ವ ಕಾರ್ಯಕರ್ತ ಗುಂಡೇಟಿಗೆ ಅಸುನೀಗಿದ್ದಾರೆ. ಆದರೆ, ತಾನು ಈ ಕರ್ತವ್ಯ ನಿಲ್ಲಿಸುವುದಿಲ್ಲ . ಯಾಕೆಂದರೆ ಪೊಲಿಯೋ ವ್ಯಾಕ್ಸಿನ್ ಚುಚ್ಚುವ ಕರ್ತವ್ಯಕ್ಕೆ ತನಗೆ 56ಡಾಲರ್ ಸಂಬಳ ಸಿಗುತ್ತೆ. ತನ್ನ ಕುಟುಂಬ ಸಾಕಲು ತನಗೀ ವೇತನ ನೆರವಾಗುತ್ತೆ. ಮುಂದೆ ಕೊರೋನಾ ವ್ಯಾಕ್ಸಿನ್ ಚುಚ್ಚೋ ಕರ್ತವ್ಯಕ್ಕೂ ತಾನು ಹೋಗುತ್ತೇನೆ. ಆದರೂ ಆ ಜಾಗದಲ್ಲೂ ತನಗೆ ಅಪಾಯವಿದೆಯೋ ಎಂಬುದನ್ನು ಮೊದಲು ಖಾತರಿಪಡಿಸಿಕೊಳ್ಳುತ್ತೇನೆ ಎಂದು ಕೊಂಚ ಆತಂಕಿತರಾಗೇ ಹೇಳುತ್ತಾರೆ ಖಾನ್.
ಭಾರತದಲ್ಲೂ ನಡೆದಿತ್ತು ಸುಳ್ಳು ಪ್ರಚಾರ !
ಪಾಕಿಸ್ತಾನದಲ್ಲಿ ಪೊಲಿಯೋ ಲಸಿಕೆ ವಿರುದ್ಧ ಪ್ರಚಾರ ನಡೆಸಲಾಗಿದ್ದಂತೆಯೇ, ಭಾರತದ ಕೆಲವು ಕಡೆಗಳಲ್ಲೂ ಮತಾಂಧ ಗುಂಪುಗಳು ಇಂತಹುದೇ ಸುಳ್ಳು ಪ್ರಚಾರವನ್ನು ನಡೆಸಿದ್ದವು .
ಮೂಲಸೌಕರ್ಯ ಸಮಸ್ಯೆ,
ಬಂಡುಕೋರರಿಂದ ತೊಡಕು
ಏಷ್ಯಾ, ಆಫ್ರಿಕಾ, ಮಧ್ಯಪೂರ್ವ ಹಾಗೂ ಲ್ಯಾಟಿನ್ ಅಮೆರಿಕ ಸಹಿತ ಅಭಿವೃದ್ಧಿಶೀಲ ರಾಷ್ಟ್ರಗಳೂ ಇನ್ನಷ್ಟು ಸಮಸ್ಯೆ ಎದುರಿಸುತ್ತಿವೆ. ಅಂದರೆ ಈ ರಾಷ್ಟ್ರಗಳಿಗೂ ಕೋವಿಡ್ ಲಸಿಕೆ ಪಡೆಯುವುದು ಸಮಸ್ಯೆಯಲ್ಲ, ಆದರೆ ಇವನ್ನು ವಿವಿಧ ಪ್ರದೇಶಗಳಿಗೆ ಸುರಕ್ಷಿತ ಸಾಗಿಸಲು ಮೂಲಸೌಕರ್ಯಗಳು ಚೆನ್ನಾಗಿಲ್ಲ. ರಸ್ತೆಗಳು ತೀರಾ ಕಚ್ಚಾರಸ್ತೆಯಾದರೆ, ಲಸಿಕೆ ದಾಸ್ತಾನಿಡೋ ರೆಫ್ರಿಜರೇಟರ್ಗಳಿಗೆ ಅಗತ್ಯ ವಿದ್ಯುತ್ ಪೂರೈಕೆ ಆಗ್ತಿಲ್ಲ್ಲ ಅಥವಾ ಅಂತಹ ವಿದ್ಯುತ್ ಸಾಮಥ್ರ್ಯ ಈ ರಾಷ್ಟ್ರಗಳಲ್ಲಿ ಇಲ್ಲ. ಇನ್ನು ಸಮರ, ಬಂಡುಕೋರರ ಬಂಡಾಯಗಳು ಕೂಡ ವ್ಯಾಕ್ಸಿನೇಟರ್ಗಳಿಗೆ ಅಪಾಯಕಾರಿ. ಹೊರಗಿನಿಂದ ಬಂದ ನೆರವನ್ನು ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟ ಕೈಗಳು ನುಂಗಿ ಹಾಕುತ್ತಿವೆ. ವ್ಯಾಕ್ಸಿನೇಶನ್ ಕ್ಯಾಂಪೈನ್ ಪ್ಲ್ಯಾನರ್ಗಳು ಸಶಸ್ತ್ರ ಉಗ್ರರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಇಲ್ಲಿನ ಸರಕಾರಗಳು ತಮ್ಮ ಬಡ ಪ್ರಜೆಗಳಿಗೆ ಕೋವಿಡ್ ವಿರೋ ಲಸಿಕೆ ಕೊಡಿಸಲು ಹರಸಾಹಸಪಡಬೇಕಿದೆ .
ಜಗತ್ತಿನಾದ್ಯಂತ ಚುಚ್ಚುಮದ್ದು ಕಾರ್ಯಕ್ರಮ ಅನುಷ್ಟಾನಿಸುವ ಯುನಿಸೆಫ್ ಅಭಿಮತವೂ ಇದಕ್ಕಿಂತ ಭಿನ್ನವಿಲ್ಲ. ಯುನಿಸೆಫ್ ಅಕಾರಿಗಳು ಒಂದೊಂದು ರಾಷ್ಟ್ರದಲ್ಲಿ ಒಂದೊಂದು ತೆರ ಸನ್ನಿವೇಶ, ಸಮಸ್ಯೆ ಎದುರಿಸಬೇಕಿದೆ. ಹಾಗಿದ್ದರೂ ಮುಂದಿನ ವರ್ಷ ತಿಂಗಳಿಗೆ 850 ಟನ್ ಕೋವಿಡ್ ವ್ಯಾಕ್ಸಿನ್ಗಳನ್ನು ಬೇರೆ ಬೇರೆ ರಾಷ್ಟ್ರಗಳಿಗೆ ಪೂರೈಸಲು ಯುನಿಸೆಫ್ ಪ್ಲ್ಯಾನ್ ಮಾಡಿದೆ.
ಪಾಶ್ಚಾತ್ಯ ವಲಯದ ಬಡ ರಾಷ್ಟ್ರ ಹೈತಿಯ ಸರಕಾರ ವ್ಯಾಕ್ಸಿನೇಶನ್ ಬಗ್ಗೆ ಇನ್ನೂ ಯಾವುದೇ ಪ್ಲ್ಯಾನ್ ಪ್ರಕಟಿಸಿಲ್ಲ. ಇಲ್ಲಿ ಕೋವಿಡ್ ಲಸಿಕೆ ವಿರುದ್ಧ ಅಪಪ್ರಚಾರಗಳೇ ಜೋರಾಗಿದ್ದು, ಜನರು ಇವಕ್ಕೆ ಹೆದರಿ ಲಸಿಕೆ ಪಡೆಯಲು ಹಿಂದೇಟು ಹಾಕುವ ಸಾಧ್ಯತೆಗಳೇ ಅಕ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಆರೋಗ್ಯ ತಜ್ಞರು.