ಹೊಸದಿಲ್ಲಿ: ಬಾಕಿಯಿರುವ ಪ್ರಕರಣಗಳ ಹೊರೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ, ಹೈಕೋರ್ಟ್ ಹಾಗೂ ಅೀನ ನ್ಯಾಯಾಲಯಗಳ ನ್ಯಾಯಾಮೂರ್ತಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಬೇಕೆಂದು ಕೋರಿ ಸೋಮವಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಜತೆಗೆ ಮೂರು ವರ್ಷದ ಅವಯಲ್ಲಿ ಪ್ರಕರಣ ವಿಲೇವಾರಿಗೊಳಿಸಲು ನ್ಯಾಯಾಂಗ ಚಾರ್ಟರ್ ಜಾರಿಗೊಳಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ದೇಶದ 25 ಹೈಕೋರ್ಟ್ಗಳಲ್ಲಿ 1,079 ನ್ಯಾಯಮೂರ್ತಿಗಳ ಹುದ್ದೆಯಿದ್ದು, ಈ ಪೈಕಿ ಈಗಲೂ 414 ಹುದ್ದೆಗಳು ಖಾಲಿಯಿವೆ ಎಂದು ಇತ್ತೀಚಿಗೆ ವರದಿಯೊಂದು ತಿಳಿಸಿತ್ತು. ಹಾಗಾಗಿ ದೇಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಬಾಕಿಯಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಅರ್ಜಿಯಲ್ಲಿದೆ.
ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ್ ಸಾರ್ವಜನಿಕ ಹಿತಾಸಕ್ತಿ ಕಾಯ್ದೆ (ಪಿಐಎಲ್)ಅನ್ವಯ ಅರ್ಜಿ ಸಲ್ಲಿಸಿದ್ದು, ಎಲ್ಲ ಹೈಕೋರ್ಟ್, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಗೃಹ ಸಚಿವಾಲಯ ಹಾಗೂ ಕಾನೂನು ಸಚಿವಾಲಯವನ್ನು ಪ್ರಕರಣದಲ್ಲಿ ಭಾಗಿದಾರರಾಗಿ ಮಾಡಲಾಗಿದೆ.
ವಕೀಲ ಅಶ್ವನಿ ಕುಮಾರ್ ದುಬೇ ಅವರ ಮೂಲಕ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣಾ ಕೋರ್ಟ್ಗಳಿಂದ ಸುಪ್ರೀಂಕೋರ್ಟ್ ತನಕ ಬರೋಬ್ಬರಿ 5 ಕೋಟಿಗೂ ಅಕ ಪ್ರಕರಣಗಳು ಬಾಕಿಯಿವೆ. ಇವುಗಳನ್ನು ತಡೆವಾಗಿ ವಿಲೇವಾರಿ ಮಾಡುವುದರಿಂದ ತ್ವರಿತ ನ್ಯಾಯ ಪಡೆಯುವ ನಾಗರಿಕರ ಮೂಲಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ.