ಹೊಸದಿಲ್ಲಿ : ಕೊರೋನಾ ಬಿಕ್ಕಟ್ಟಿನ ನಡುವೆಯೇ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ, ಆತ್ಮನಿರ್ಭರ ಭಾರತದತ್ತ ಹೆಜ್ಜೆ ಇಡಲು ರಿಲಯನ್ಸ್ ರಿಟೇಲ್ ಅಣಿಯಾಗಿದ್ದು, ಎಜಿಯೋ ಇಂಡಿ ಮುಖೇನಾ 40ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಹಬ್ಬರ ಋತುವಿನಲ್ಲಿ ಮಾರಾಟ ವೇದಿಕೆ ಒದಗಿಸಿಕೊಟ್ಟಿದೆ.
ಸ್ಥಳೀಯ ಉತ್ಪನ್ನಗಳ ಮಾರಾಟ ಉತ್ತೇಜಿಸುವ ನಿಟ್ಟಿನಲ್ಲಿ ಎಜಿಯೋ, ಇಂಡಿ ಬೈ ಹಾಗೂ ಸ್ವದೇಶ್ ಎಂಬ ಅಭಿಯಾನಗಳನ್ನು ಶುರುಮಾಡಿದ್ದು, ಇದರ ಮೂಲಕ 30 ಸಾವಿರಕ್ಕೂ ಅಕ ಕುಶಲಕರ್ಮಿಗಳು ಅವರ 600ಕ್ಕೂ ಅಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಪ್ರಧಾನಿ ಮೋದಿ ಅವರ ಆತ್ಮನಿರ್ಭರದ ಕರೆಯ ಬಳಿಕ ಈ ಮಾಧ್ಯಮಗಳನ್ನು ಬಳಸಿಕೊಂಡು ವ್ಯಾಪಾರ ಮಾಡುತ್ತಿರುವ ಕುಶಲ ಕರ್ಮಿಗಳ ಸಂಖ್ಯೆ ಹೆಚ್ಚಿದ್ದು, ಹಲವು ವರ್ಷಗಳ ಶ್ರಮ ಈಗ ಫಲನೀಡಿದೆ ಎಂದು ರಿಲಯನ್ಸ್ ಫ್ಯಾಶನ್ಸ್ ಹಾಗೂ ಲೈಫ್ಸ್ಟೈಲ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಹೇಳಿದ್ದಾರೆ.
ಎಜಿಯೋ ಇಂಡಿ ಸ್ಥಳೀಯ ಕುಶಲಕರ್ಮಿಗಳ ಆನ್ಲೈನ್ ಮಾರುಕಟ್ಟೆಯಾಗಿದ್ದರೆ, ಸ್ವದೇಶ್ ಎಂಬುದು ಕೇಂದ್ರ ಜವಳಿ ಸಚಿವಾಲಯದಿಂದ ಮಾನ್ಯತೆ ಪಡೆದ ದೇಶಿಯ ಕೈಮಗ್ಗ ಗುರುತಿಸಿ ಪಟ್ಟಿ ಮಾಡಲಾದ ಮಳಿಗೆಗಳ ಉತ್ಪನ್ನದ ಬ್ರಾಂಡ್ ಆಗಿದ್ದು, ಈ ಬ್ರಾಂಡ್ ರಿಲಯನ್ಸ್ ಟ್ರೆಂಡ್ಸ್, ಎಜಿಯೋ ಸೇರಿ ಎಲ್ಲೆಡೆ ಲಭ್ಯವಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.