ಬೆಂಗಳೂರು: ಯುವ ಜನತೆ ಮೇಲೆ ದುಷ್ಪರಿಣಾಮ ಬೀರುತ್ತುರುವ ಆನ್ಲೈನ್ ಗೇಮ್ಗಳನ್ನು ನಿಷೇಸಲು ಶೀಘ್ರದಲ್ಲಿ ಕಾನೂನು ಜಾರಿಗೆ ತರಲಾಗುವುದು ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್ಲೈನ್ ಗೇಮ್ ನಂತಹ ದುಶ್ಚಟಗಳಿಗೆ ಯುವಕರು ಬಲಿಯಾಗುತ್ತಿದ್ದು, ಮನೆ, ಮಠಗಳನ್ನು ಮಾರಾಟ ಮಾಡಿ ಬೀದಿ ಪಾಲಾಗಿರುವ ಘಟನೆಗಳು ನಡೆಯುತ್ತಿದ್ದು,ಪೊಷಕರು ಠಾಣೆಗಳಿಗೆ ದೂರು ನೀಡುತ್ತಿದ್ದಾರೆ. ಈ ಹಿನ್ನೆಲೆ ಕೆಲವು ರಾಜ್ಯಗಳಲ್ಲಿ ಆನ್ಲೈನ್ ಗೇಮ್ಗಳನ್ನು ನಿಷೇಸಿದ ರೀತಿ ನಮ್ಮ ರಾಜ್ಯದಲ್ಲೂ ನಿಷೇಸುವ ಚಿಂತನೆಗಳು ನಡೆಯುತ್ತಿದೆ ಎಂದರು.
ಕಾನೂನುಬಾಹಿರ ಆನ್ಲೈನ್ ಗೇಮ್ನಲ್ಲಿ ಯುವಕರು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದು, ಇದನ್ನು ನಿಷೇಸದೇ ಹೋದಲ್ಲಿ ಯುವಕರನ್ನು ಕಳೆದುಕೊಳ್ಳಬೇಕಾಗುತ್ತದೆ. ದುಶ್ಚಟಕ್ಕೆ ತಳ್ಳುವ ಇಂತಹ ಗೇಮ್ಗಳ ನಿಷೇಧಕ್ಕೆ ಬೇರೆ ರಾಜ್ಯದಲ್ಲಿ ಜಾರಿಗೆ ತಂದಿರುವ ಕಾನೂನುಗಳನ್ನು ಅಧ್ಯಯನ ನಡೆಸಲು ಅಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲೇ ಆನ್ಲೈನ್ ಗೇಮ್ ನಿಷೇಧಕ್ಕೆ ಕಾನೂನು ಬರಲಿದೆ ಎಂದರು.