ಸಿನಿಮಾ ಮಂದಿರಗಳಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ಇಲ್ಲಿದೆ ಹೈಲೈಟ್ಸ್

ಬೆಂಗಳೂರು: ನಾಳೆಯಿಂದ ಚಿತ್ರಮಂದಿರಗಳು ತೆರೆಯಲಿವೆ. ಎಲ್ಲಾ ಸಿನಿಮಾ ಹಾಲ್ಗಳನ್ನ ಸ್ವಚ್ಛಗೊಳಿಸಿ ಅಣಿಗೊಳಿಸಲಾಗುತ್ತಿದೆ. ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಚಿತ್ರಮಂದಿರಗಳು ಅರ್ಧ ಮಾತ್ರ ಭರ್ತಿ ಆಗಬೇಕು. ಕಂಟೈನ್ಮೆಂಟ್ ವಲಯಗಳಲ್ಲಿ ಚಿತ್ರಮಂದಿರ ತೆರೆಯುವಂತಿಲ್ಲ ಎಂಬಿತ್ಯಾದಿ ನಿರ್ದೇಶನಗಳನ್ನ ನೀಡಲಾಗಿದೆ. ಈ ಮಾರ್ಗಸೂಚಿಗಳು ಚಿತ್ರಮಂದಿರಗಳು, ರಂಗಮಂದಿರಗಳು, ಮಲ್ಟಿ ಪ್ಲೆಕ್ಸ್ಗಳಿಗೆ ಅನ್ವಯವಾಗುತ್ತವೆ.
* ಕನಿಷ್ಠ 6 ಅಡಿ ಅಂತರ ಕಡ್ಡಾಯ
* ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ
* ಉಗುಳುವುದು ನಿಷಿದ್ಧ
* ಆರೋಗ್ಯ ಸೇತು ಆಪ್ ಇರಬೇಕು
* ನಿಯಮಿತವಾಗಿ ಮಾನವ ಸಂಪರ್ಕಕ್ಕೆ ಬರೋ ಎಲ್ಲ ಸ್ಥಳಗಳ ಸ್ಯಾನಿಟೈಸಿಂಗ್* ಫುಡ್ ಕೌಂಟರ್ ಗಳನ್ನು ಹೆಚ್ಚಿಸಬೇಕು
* ಪ್ಯಾಕ್ ಆಗಿರುವ ಆಹಾರ, ಸ್ನ್ಯಾಕ್ಸ್ ಗಳ ಮಾರಾಟ
* ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್
* ರೋಗಲಕ್ಷಣ ರಹಿತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ
* ಪ್ರತಿ ಚಿತ್ರ ಪ್ರದರ್ಶನಗಳ ಬಳಿಕ ಸಾಕಷ್ಟು ಸಮಯ ಇರಬೇಕು
* ಪ್ರವೇಶ, ನಿರ್ಗಮನ ವೇಳೆ ದೈಹಿಕ ಅಂತರ ಪಾಲನೆ
* ಟಿಕೆಟ್ಗೆ ಹಣಪಾವತಿಗೆ ಡಿಜಿಟಲ್ ಪೇಮೆಂಟ್ಗೆ ಆದ್ಯತೆ
* ಟಿಕೆಟ್ ವಿತರಿಸುವಾಗ ವೀಕ್ಷಕರ ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಬೇಕು
* ಸಿನಿಮಾ ಹಾಲ್ ಒಳಗೆ ಆಹಾರ ಸೇವನೆ ನಿಷಿದ್ಧ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ