ಹೊಸದಿಲ್ಲಿ : 2019-20ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಕೆಯ ದಿನಾಂಕವನ್ನು ಕೇಂದ್ರ ಹಣಕಾಸು ಸಚಿವಾಲಯ ವಿಸ್ತರಿಸಿದ್ದು, ಐಟಿಆರ್ ಸಲ್ಲಿಕೆಯ ನಿಗದಿತ ದಿನಾಂಕದ ಅಸೂಚನೆಯನ್ನು ಹೊರಡಿಸಿದೆ.
ಐಟಿಆರ್ ಸಲ್ಲಿಕೆಗೆ ಒಂದು ತಿಂಗಳು ಹೆಚ್ಚಿನ ಗಡುವು ನೀಡಿದ್ದು, ವೈಯಕ್ತಿಕ ತೆರಿಗೆದಾರರಿಗೆ ಡಿ.31ರಂದು ಹಾಗೂ ತೆರಿಗೆದಾರರ ಖಾತೆಗಳು ಲೆಕ್ಕಪರಿಶೋಧನೆಗೆ ಒಳಪಡಿಸಬೇಕಾದಂತಹವರಿಗೆ ಜನವರಿ 31,2021ರ ವರೆಗಿನ ಗಡುವು ನೀಡಿದೆ.
ಕಳೆದವಾರವಷ್ಟೇ ಐಟಿಆರ್ ಮತ್ತು ಆಡಿಟ್ ವರದಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಈಗ ಅಸೂಚನೆ ಹೊರಡಿಸಿದ್ದು, ಕೊರೋನಾ ಬಿಕ್ಕಟ್ಟಿನ ನಡುವೆ ತೆರಿಗೆದಾರರಿಗೆ ನಿರಾಳ ನೀಡುವ ನಿಟ್ಟಿನಲ್ಲಿ ಆರ್ಟಿಐ ಸಲ್ಲಿಕೆ ಅವ ವಿಸ್ತರಿಸಿದೆ.