ಮುಂಬೈ : ಫ್ರಾನ್ಸ್ನ ಎಫ್ಐಎ ಗಲ್ರ್ಸ್ ಆನ್ ಟ್ರ್ಯಾಕ್-ದಿ ರೈಸಿಂಗ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಭಾರತೀಯಳಾದ ಮುಂಬೈ ಮೂಲದ ಆಶಿ ಹನ್ಸ್ಪಾಲ್ ಎಂಬ ಬಾಲಕಿಗೆ ಹೆಚ್ಚು ಅರ್ಹ ಮತ್ತು ಪ್ರಭಾವಶಾಲಿ ಹೊಸ ಚಾಲಕಿ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು,ಆಶಿ ಸಾಧನೆ ಮೋಟಾರ್ಸೋರ್ಟ್ಗಳಲ್ಲಿ ಮಹಿಳೆಯರ ಉತ್ತೇಜಿಸುವ ಮೈಲಿಗಲ್ಲು ಆಗಲಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಸೀತಾ ರೈನಾ ತಿಳಿಸಿದ್ದಾರೆ.
ಪಾಲ್ ರಿಕಾರ್ಡ್ ಕಾರ್ಟಿಂಗ್ ಸೆಕ್ರ್ಯೂಟ್ನಲ್ಲಿ 2019 ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ವಿಶ್ವದ ವಿವಿಧೆಡೆಯಿಂದ 70 ಮಂದಿ ಆಯ್ಕೆಯಾಗಿದ್ದು, ಇವರಲ್ಲಿ 13 ವರ್ಷದ ಆಶಿ ಕೂಡ ಒಬ್ಬರಾಗಿದ್ದರು.ಆಶಿ ಎಫ್ಐಎ ಮನಗೆಲ್ಲುವಲ್ಲಿ ಯಶಸ್ವಿಯಾಗಿ, ಪ್ರಶಸ್ತಿ ಗಳಿಸಿದ್ದಾರೆ ಎಂದು ಸೀತಾ ತಿಳಿಸಿದ್ದಾರೆ. ಅಲ್ಲದೆ, ಆಶಿಯ ಈ ಸಾಧನೆಗಾಗಿ 2020ರ ಅತ್ಯುತ್ತಮ ಮಹಿಳಾ ಮೋಟರ್ ಸ್ಪೋಟ್ರ್ಸ್ ಪ್ರಶಸ್ತಿಯನ್ನು ಅವರಿಗೆ ನೀಡಿದ್ದೇವೆ ಎಂದಿದ್ದಾರೆ.