
ಮೈಸೂರು: ಇಲ್ಲಿನ ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಅ.19ರಂದು ಸೋಮವಾರ ನಡೆಯಲಿದೆ.
ಬೆಳಗ್ಗೆ 11.15ರಿಂದ11.45ರ ತನಕ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಲೈವ್ ಮೂಲಕ ಘಟಿಕೋತ್ಸವದ
ಭಾಷಣ ಮಾಡಲಿದ್ದಾರೆ. ದೇಶದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಉದ್ದೇಶಿಸಿ ಮಾತನಾಡುತ್ತಿರುವುದು ವಿಶೇಷವಾಗಿದೆ.
ವಿವಿಯ ಕ್ರಾಫರ್ಡ್ ಹಾಲ್ನ ಸಭಾಂಗಣದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಇಲ್ಲಿನ ವೇದಿಕೆಯಲ್ಲಿ ರಾಜ್ಯಪಾಲ ವಜುಬಾಯಿ ರೂಡಾಭಾಯ್ ವಾಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಭಾಗವಹಿಸುವರು. ಕೊರೋನಾ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಿಂಡಿಕೇಟ್ ಮತ್ತು ಶಿಕ್ಷಣ ಮಂಡಳಿ ಸದಸ್ಯರು ಭಾಗವಹಿಸುವರು. ಘಟಿಕೋತ್ಸವದಲ್ಲಿ 29,018 ವಿದ್ಯಾರ್ಥಿಗಳಿಗೆ ಪದವಿ, 654 ಮಂದಿಗೆ ಪಿಎಚ್.ಡಿ ಪ್ರದಾನ ಮಾಡಲಾಗುತ್ತದೆ.