
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮದ ಹಳ್ಳದ ಆಚೆಯ ತೋಟದಲ್ಲಿ ಸಿಲುಕಿದ್ದ, ಒಂದೇ ಕುಟುಂಬದ ಮೂವರು ಹಾಗೂ ನಾಲ್ಕು ದನಕರುಗಳನ್ನು ಅಗ್ನಿಶಾಮಕ ಸಿಬ್ಬಂದಿ ಬುಧವಾರ ಸುರಕ್ಷಿತವಾಗಿ ಹೊರ ತಂದಿದ್ದಾರೆ.
ತಮ್ಮ ತೋಟದ ಕೆಲಸಕ್ಕಾಗಿ ರೈತ ಕುಟುಂಬ ಮಂಗಳವಾರ ತೆರಳಿದ್ದು, ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಮರಳಿ ಗ್ರಾಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಸುದ್ದಿ ತಿಳಿದ ತಾಲೂಕಾಕಾರಿಗಳು ಸ್ಥಳಕ್ಕೆ ತೆರಳಿ, ಗಂಡ, ಹೆಂಡತಿ, ಮಗು ಹಾಗೂ 4 ದನಕರುಗಳನ್ನು ಸುರಕ್ಷಿತವಾಗಿ ಹಳ್ಳದ ಆಚೆಯಿಂದ ತಂದಿದ್ದಾರೆ. ತಹಶೀಲ್ದಾರ್ ಸಂಜೀವಕುಮಾರ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ.