ಮಂದಿರ, ಮಸೀದಿಗಳಿಗಾಗಿ ಕಿತ್ತಾಟ ಬೇಡ; ರಾಜಕೀಯ ಪ್ರೇರಣೆಗೆ ಕಿವಿಗೊಡದೆ ದೇಶದ ಏಕತೆಗೆ ಗಮನಹಸಿ: ಯೋಗ ಗುರು ಬಾಬಾ ರಾಮ್ ದೇವ್

ವಿಜಯಪುರ: ಯಾವ ರಾಜಕೀಯ ಪಕ್ಷಗಳೂ ಜಾತಿ ಮುಕ್ತ ಭಾರತದ ಸಂಕಲ್ಪ ಮಾಡುತ್ತಿಲ್ಲ. ಕೇವಲ ಜಯಘೋಷ ಕೂಗಿದರೆ ಭಾರತ ವಿಶ್ವಗುರು ಆಗಲ್ಲ, ಅದಕ್ಕೆ ಕರ್ಮಯೋಗ ಬೇಕು. ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಪಕ್ಷಗಳು ವಿಷಬೀಜ ಬಿತ್ತುತ್ತಿವೆ. ದೇಶ ವ್ಯಸನಮುಕ್ತ, ದಿವ್ಯಭಾರತ ಅವುಗಳ ಕುರಿತು ಆದ್ಯತೆ ಆಗಬೇಕಿದೆ ಎಂದು ಯೋಗಗುರು ಬಾಬಾ ರಾಮದೇವ್ ತಿಳಿಸಿದ್ದಾರೆ.

ವಿಜಯಪುರಕ್ಕೆ ಆಗಮಿಸಿದ್ದ ಬಾಬಾ ರಾಮ್ ದೇವ್, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ನಂತಹ ಘೋಷಣೆ ಕೂಗಿದ ಮಾತ್ರಕ್ಕೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಾಬಾ ಶ್ರೀರಾಮ, ಹನುಮಂತ, ಪತಂಜಲಿ ಹೀಗೆ ಎಲ್ಲರನ್ನೂ ಒಂದೊಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ.ಯಾವ ಕಾರಣಕ್ಕೂ ಹೀಗಾಗಬಾರದು. ಶ್ರೀರಾಮನ ಮೂರ್ತಿ, ಮಂದಿರ ನಿರ್ಮಾಣಕ್ಕಿಂತಲೂ ರಾಮನ ಆದರ್ಶ ಪಾಲಿಸುವುದು ಅಗತ್ಯ ಎಂದಿದ್ದಾರೆ.

ಕರ್ನಾಟಕದಲ್ಲಿ ಭಗವಾನ್ “ರಾಮಮಂದಿರ ಏಕೆ ಬೇಡ” ಎಂಬ ವಿವಾದಾತ್ಮಕ ಪುಸ್ತಕ ಬರೆದು ಶ್ರೀರಾಮನನ್ನು ಅವಮಾನಿಸಿದ ಬಗ್ಗೆ ಮಾತನಾಡಿದ ರಾಮ್ ದೇವ್ “ನಾವು ನಮ್ಮ ಪೂರ್ವಜರನ್ನು ಹೀಗೆ ಅವಮಾನಿಸುವುದುಆದ್ಯಾತ್ಮಿಕ ಹಾಗೂ ಸಾಮಾಜಿಕ ಮಹಾಪರಾಧವಾಗಲಿದೆ ಎಂದರು.

ಹಿಂದೂಗಳು, ಮುಸಲ್ಮಾನರು ಒಟ್ಟಾಗಿ ಈ ರಾಷ್ಟ್ರ ನಿರ್ಮಿಸಿದ್ದಾರೆ. ಮಂದಿರ, ಮಸೀದಿಗಳ ಹೆಸರಲ್ಲಿ ಯಾರೂ ತಮ್ಮ ಹೃದಯ ಕಲ್ಲಾಗಿಸಿಕೊಳ್ಳುವುದು ಬೇಡ. ಯಾರೇನೇ ಅಂದರೂ ನಮ್ಮ ಪೂರ್ವಜರು ಒಬ್ಬರೇ.ಯಾವುದೇ ರಾಜಕೀಯ ಪ್ರೇರಣೆಗೆ ಕಿವಿಗೊಡದೆ ದೇಶದ ಏಕತೆ, ಅಖಂಡತೆಯನ್ನು ಕಾಪಾಡಿಕೊಳ್ಳುವತ್ತ ಗಮನಿಸಿ ಎಂದು ಕರೆ ನೀಡಿದರು.

Vijayapura,Baba Ram dev

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ