ಮಹದಾಯಿ ಮುಗಿದ ಅಧ್ಯಾಯ: ಸಚಿವ ಶೆಟ್ಟರ್

ಧಾರವಾಡ: ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಗೆಲುವು ಸಾಸಿದೆ. ಅದೀಗ ಮುಗಿದ ಅಧ್ಯಾಯ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಮಹದಾಯಿ ವಿಚಾರವಾಗಿ ಗೋವಾ ಮೇಲ್ಮನವಿ ಸಲ್ಲಿಸಿದ ಬಗ್ಗೆ ಗುರುವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯವಾಗಿ ಕರ್ನಾಟಕದ ಕಾಂಗ್ರೆಸ್ ನಾಯಕರು ಗೋವಾದ ಕೈ ನಾಯಕರಿಗೆ ಪಿತೂರಿ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು.
ಮಹದಾಯಿ ಕುರಿತಂತೆ ನ್ಯಾಯಾಲಯದಲ್ಲಿ ಈಗಾಗಲೇ ತೀರ್ಪು ಕರ್ನಾಟಕದ ಪರವಾಗಿ ಬಂದಿದೆ. ಯೋಜನೆ ಅನುಷ್ಠಾನಕ್ಕೆ ರೂ.500 ಕೋಟಿಯೂ ಮೀಸಲಿಟ್ಟಿದೆ. ಇನ್ನೇನಿದ್ದರೂ ಕಾಮಗಾರಿ ಆರಂಭಿಸುವುದಷ್ಟೇ ಬಾಕಿ ಎಂದರು.
ಗೋಗಾ ಪುನಃ ಖ್ಯಾತೆ ತೆಗೆದರೂ, ನಾವು ತಲೆ ಕಡೆಸಿಕೊಳ್ಳಲ್ಲ. ಅವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ. ಈ ಬಗ್ಗೆ ಗೋವಾ ರಾಜ್ಯ ಮುಖ್ಯಮಂತ್ರಿ ಜತೆಗೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದರು.
ಸಿಎಂ ಬಳಿ ಚರ್ಚೆ:
ಇದೇ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್, ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಮಾತನಾಡಿ, ಪರಿಹರಿಸುವ ವ್ಯವಸ್ಥೆ ಮಾಡುವುದಾಗಿಯೂ ಹೇಳಿದರು.
ಸೇರ್ಪಡೆ ಊಹಾಪೋಹ:
ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಸಿದ ಅವರು, ಇದು ಊಹಾ ಪೋಹ. ಇದು ಮಾಧ್ಯಮಗಳು ಬಿಂಬಿಸಿದ ಕೆಲಸ. ವಿನಯ್ ಅವರು ಪಕ್ಷ ಸೇರ್ಪಡೆ ಬಗ್ಗೆ ನನ್ನನ್ನೂ ಸಂಪರ್ಕ ಮಾಡಿಲ್ಲ. ಹಾಗೇ ಬಂದಾಗ ನೊಡೋಣ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ