ಬಿಜೆಪಿ ಸೇರ್ಪಡೆ ವದಂತಿ: ಮಾಜಿ ಸಚಿವ ವಿನಯ್ ಸ್ಪಷ್ಟನೆ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ

ಧಾರವಾಡ: ನಾನು ಯಾವುದೇ ನಾಯಕರನು ಭೇಟಿಯಾಗಿಲ್ಲ. ಯಾವುದೇ ಪ್ರಸ್ತಾಪವೂ ನನ್ನಗೆ ಬಂದಿಲ್ಲ. ಬಿಜೆಪಿ ಸೇರ್ಪಡೆ ಮಾಧ್ಯಮಗಳ ಊಹಾಪೋಹ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು.
ಗುರುವಾರ ಬಿಜೆಪಿ ಸೇರ್ಪಡೆ ವದಂತಿ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೆಳೆದ ದಾರಿಯೇ ಬೇರೆ. ಮೊದಲು ನಾನು ಪಕ್ಷೇತರ ಶಾಸಕ. ಹೀಗಾಗಿ ಕಾರ್ಯಕರ್ತರು, ಎಲ್ಲ ಸಮಾಜದ ಜನ ನನ್ನ ಜೊತೆಗಿದ್ದು, ಅವರನ್ನು ಕೇಳಿಯೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಸಿ.ಪಿ.ಯೋಗೇಶ್ವರ ಕುದುರೆ ಖರೀದಿಗೆ ಬಂದಿದ್ದರು. ನನ್ನಿಂದ ಆರು ಕುದುರೆ ಖರೀದಿಸಿದ್ದಾರೆ. ನಾನು ಯಾರ ಜೊತೆಯೂ ಹೋಗಿ ಮಾತನಾಡಿಲ್ಲ. ಮಾಧ್ಯಮಗಳು ಯಾವುದೇ ದಾಖಲೆಗಳು ಇಲ್ಲದೇ, ನಿಮ್ಮ ಲೆಕ್ಕಚಾರದಲ್ಲಿಯೇ ಸುದ್ದಿ ಮಾಡದಂತೆ ಕೋರದರು.
ನಾನು ದೊಡ್ಡ ಲೀಡರ್ ಅಲ್ಲ. ಯಾವುದೇ ಸ್ವಾಮೀಜಿಗಳು ಮಾತನಾಡಿಲ್ಲ. ಸಿಬಿಐನಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರ್ಪಡೆ ಅಂತಾ ಸುದ್ದಿ ಆಗುತ್ತಿದೆ. ಸಿಬಿಐ ಏನು ಬಿಜೆಪಿ ಕೆಳಗಡೆ ಕೆಲಸ ಮಾಡುತ್ತೇನು? ನಾನು ಬಿಜೆಪಿ ಹೋಗಿ ಬಿಟ್ಟು ಬಿಡುತ್ತಾರೆಯೇ? ಎಂದು ಪ್ರಶ್ನಿಸಿದರು.
ಈ ಕೇಸ್‍ಗಳು ಇರೋದು ಇದ್ದಿದ್ದೇ. ಈಗಾಗಲೇ ಏಳು ನೂರು ಜನರ ವಿಚಾರಣೆ ಮಾಡಿದ್ದಾರೆ. ಒಂದು ವರ್ಷ ಮೂರು ತಿಂಗಳಿನಿಂದ ಸಿಬಿಐ ವಿಚಾರಣೆ ನಡೆದಿದೆ. ಅದರ ಬಗ್ಗೆ ನನಗೇನು ವಿಚಾರ ಇಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ