ಮುಖ್ಯಮಂತ್ರಿ ಕುಮಾರಸ್ವಾಮಿ ನಾಲಾಯಕ್ : ಜಗದೀಶ ಶೆಟ್ಟರ್

ಕೊಪ್ಪಳ: ಮುಖ್ಯಮಂತ್ರಿ ಕುಮಾರಸ್ವಾಮಿ ನಾಲಾಯಕ್ ಎಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಕೊಪ್ಪಳಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು,   ರಾಜ್ಯದಲ್ಲಿ ಅಕ್ರಮ ಮರಳು ದಂದೆ ವಿಪರೀತವಾಗಿದೆ. ಅಂತಹ ಅಕ್ರಮ ಮರಳು ದಂಧೆ ತಡೆಯುವಲ್ಲಿ ಹತ್ತು ವರ್ಷ ಹಿಂದಿನ ಬಿಜೆಪಿ ಸರಕಾರದತ್ತ ಬೆರಳು ತೋರಿಸುತ್ತಾರೆ. ಅದು ಎಷ್ಟರ ಮಟ್ಟಿಗೆ ಸರಿ ಎಂದು ಶೆಟ್ಟರ್ ಆಕ್ರೋಶ ವ್ಯಕ್ತ ಪಡಿಸಿ, ತಾವು ಕೂಡ ಆಗ ವಿರೋಧ ಪಕ್ಷದಲ್ಲಿದ್ದು ಮರಳು ದಂಧೆ ವಿಚಾರದಲ್ಲಿ ತಪ್ಪಾಗಿದ್ದರೆ ಎತ್ತಿ ಹಿಡಿಯಬಹುದಿತ್ತು. ಆದರೆ ಹತ್ತು ವರ್ಷದ ಹಿಂದಿನಿಂದಲೂ ಮರಳು ದಂಧೆ ಹೀಗೇ ಇತ್ತು, ಈಗಲೂ ಇರುತ್ತೆ ಅನ್ನೋದಾದ್ರೆ ಕುಮಾರಸ್ವಾಮಿ ನಾಲಾಯಕ್ ಅಲ್ವಾ ಎಂದು ಸಿಡಿಮಿಡಿಗೊಂಡನು.

ಜೆಡಿಎಸ್ ಕಾರ್ಯಕರ್ತನ‌ ಕೊಲೆ ವಿಚಾರಕ್ಕೆ ಸಿಎಂ ಎನ್‌ಕೌಂಟರ್ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿ, ಕುಮಾರಸ್ವಾಮಿ ರಾಜ್ಯಕ್ಕೆ ಸಿಎಂ ಎನ್ನುವುದನ್ನ ಮರೆತು ನಾಲಗೆ ಹರಿಬಿಡ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರಲು ಕುಮಾರಸ್ವಾಮಿ ಯೋಗ್ಯರಲ್ಲ. ಅವರಿಗೆ ಸಿಎಂ ಸ್ಥಾನದಲ್ಲಿರಲು ಅರ್ಹತೆ ಇಲ್ಲ. ಸಂಪುಟ ಪುನರ್ರಚನೆಯಿಂದ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ ಹೊಗೆಯಾಡ್ತಿದೆ.

ರಾಮಲಿಂಗಾರೆಡ್ಡಿ, ರಮೇಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ನಾಯಕರಲ್ಲಿ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್ ತೆಕ್ಕೆಯಲ್ಲಿಲ್ಲ. ಇದು ಕಾಂಗ್ರೆಸ್ ನಾಯಕರು ಹುಟ್ಟು ಹಾಕಿರುವ ವದಂತಿ. ಆದರೆ ಬಿಜೆಪಿಯ ೧೦೪ ಜನ ಶಾಸಕರು ಒಗ್ಗಟ್ಟಾಗಿದ್ದೇವೆ. ಎಂದು ಹೇಳಿದ ಅವರು, ನಮ್ಮ ನಾಯಕರು ಯಡಿಯೂರಪ್ಪ. ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಬೇಕೆಂಬ ವಿಚಾರ ಶುದ್ಧ ಸುಳ್ಳು ಎಂದು ಸ್ಪಷ್ಟ ಪಡಿಸಿದರು.

ರಾಜ್ಯದ ಮೈತ್ರಿ ಸರಕಾರ ಬೀಳುತ್ತೆ ಅಂತ ಮೊದಲಿನಿಂದಲೂ ಹೇಳ್ತಾ ಬಂದಿದೀನಿ. ಇದು ಅಸ್ಥಿರ ಸರಕಾರ. ಬಿಜೆಪಿ ಯಾವುದೇ ಸರಕಾರವನ್ನ ಬೀಳಿಸಲ್ಲ. ಅವರವರೇ ಕಚ್ಚಾಡಿಕೊಂಡು ಸರಕಾರ ಪತನವಾಗುತ್ತೆ. ಎಂದು ಹೇಳಿದರು.

jagadish shetter,Koppal,cm H D Kumaraswamy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ