
ಧಾರವಾಡ: ರಾಜ್ಯದಲ್ಲಿ ಎರಡು ವಿಧಾನಸಭೆಗೆ ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ಗೆ ಚುನಾವಣೆ ನಡೆಯಲಿದ್ದು, ಸ್ರ್ಪಸಿರುವ ಬಿಜೆಪಿ ಅಭ್ಯರ್ಥಿಗಳು ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಒಲವು ಬಿಜೆಪಿ ಪರವಾಗಿದೆ. ಮೋದಿ ಹಾಗೂ ಬಿ.ಎಸ್.ವೈ ಆಡಳಿತದ ಸಾಧನೆ ಗೆಲುವಿಗೆ ವರದಾನವಾಗಲಿವೆ. ಬಿಜೆಪಿ ಅಲೆ ಇಲ್ಲದ ಕ್ಷೇತ್ರದ ಮತದಾರರನ್ನು ಪಕ್ಷದ ಕಡೆಗೆ ವಾಲುವಂತೆ ಮಾಡಿದೆ ಎಂದರು.
ಶಿರಾ-ಆರ್.ಆರ್.ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ಕಡಿಮೆ ಇದೆ. ಕಳೆದ ಚುನಾವಣೆಯಲ್ಲಿ ಬಿಪಿಗೆ 14 ಸಾವಿರ ಮತಗಳು ಬಂದಿವೆ. ಈ ಸಾರಿ ಮುಖ್ಯಮಂತ್ರಿ ಹಾಗೂ ನಾನು ವಿಶೇಷ ಪ್ರವಾಸದ ಮೂಲಕ ಮತದರಾರ ಸೆಳೆಯುವ ಪ್ರಯತ್ನ ಮಾಡಿದ್ದಾಗಿ ತಿಳಿಸಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ನ ಸ್ಥಳೀಯ ಸಂಸ್ಥೆಗಳ ಸದಸ್ಯರು ಅಲ್ಲಿನ ಆಂತರಿಕ ಕಿತ್ತಾಟದಿಂದ ಭ್ರಮನಿರಸಗೊಂಡು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದು, ಅಲ್ಲಿ ಬಿಜೆಪಿ ಪರ ಅಲೆ ಸೃಷ್ಠಿಯಾಗಿದೆ. ಗೆಲವು ನಮ್ಮದೆ ಎಂದರು.