ಧಾರವಾಡ: ಕೆಲ ತಾಂತ್ರಿಕ ತೊಂದರೆ ಹಾಗೂ ಗೊಂದಲಗಳಿಂದ ರೈತರಿಗೆ ಬೆಳೆವಿಮೆ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಶೀಘ್ರವೇ ರೈತರ ಖಾತೆಗೆ ಹಣ ಬಿಡುಗಡೆ ಮಾಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ವಿಶೇಷವಾಗಿ ಸಮೀಕ್ಷೆ ರೈತರಿಂದ ಮಾಡಿಸಿದ್ದೇವೆ. ಪುನಃ ಸಮೀಕ್ಷೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ವಿಮೆ ಹಣ ಜಮಾವಣೆಯಲ್ಲಿ ಆಗಿರುವ ತಾಂತ್ರಿಕ ತೊಂದೆರೆ ಹಾಗೂ ಗೊಂದಲ ಸರಿಪಡಿಸಿದೆ. ತಾಂತ್ರಿಕ ತೊಂದರೆ ಇರವ ರೈತರಿಗೆ ಚೆಕ್ ಮೂಲಕ ಹಣ ಸಂದಾಯ ಮಾಡಲು ಆದೇಶ ನೀಡಿದ್ದಾಗಿ ತಿಳಿಸಿದರು.
ಕಳೆದ ವಾರ ವಿಮಾ ಕಂಪೆನಿಗಳ ಜತೆಗೆ ಸಭೆ ನಡೆಸಿ, 2016ರಿಂದ ಈವರೆಗೂ ಬರಬೇಕಾದ ಬೆಳೆವಿಮೆ ಹಣ ಬಿಡುಗಡೆಗೆ ಸದ್ಯ ಸೂಚಿಸಿದೆ. ವಿಮಾ ಕಂಪೆನಿಗಳು ಹಣ ಬಿಡುಗಡೆ ಒಪ್ಪಿಗೆ ಸೂಚಿವೆ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧದ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೌರವ, ನನ್ನ ಗಮನಕ್ಕೆ ಬಂದಿಲ್ಲ. ಬಂದರೆ, ಪರಿಶೀಲಿಸಿ ಕ್ರಮ ಕೈಗೊಳುವುದಾಗಿ ಹೇಳಿದರು.