ಬಿ ಸಿ ಪಾಟೀಲ್ ಪುತ್ರಿಗೆ ಕೂಡಿ ಬಂದ ಕಂಕಣ ಭಾಗ್ಯ

ಸಿನಿಮಾ ನಟ ಹಾಗೂ ರಾಜಕೀಯ ಮುಖಂಡ ಬಿ.ಸಿ ಪಾಟೀಲ್ ಅವರ ಪುತ್ರಿ ನಟಿ ಸೃಷ್ಟಿ ಪಾಟೀಲ್ ವಿವಾಹ ನಿಶ್ಚಿತಾರ್ಥ ಶನಿವಾರ ಬೆಂಗಳೂರಿನಲ್ಲಿ ನೆರವೇರಿತು.ನಟಿ ಸೃಷ್ಟಿ ಪಾಟೀಲ್ ಮದುವೆ ಆಗುತ್ತಿರುವ ಹುಡುಗನ ಹೆಸರು ಸುಜಯ್ ಬೇಲೂರು. ಮೂಲತಃ ಬೇಲೂರಿನವರಾಗಿರುವ ಸುಜಯ್ ಬೆಂಗಳೂರಿನಲ್ಲಿ ಸ್ವಂತ ಉದ್ಯಮವನ್ನು ಹೊಂದಿದ್ದಾರೆ.’ಹ್ಯಾಪಿ ನ್ಯೂ ಇಯರ್’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ ಸೃಷ್ಟಿ ಪಾಟೀಲ್ ಒಂದು ಸಿನಿಮಾ ನಂತರ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಆರಂಭ ಮಾಡಿದ್ದರು. ಕಳೆದ ಬಾರಿ ಚುನಾವಣೆಯಲ್ಲಿ ತಂದೆ ಪರ ಪ್ರಚಾರ ಮಾಡಿ ತಂದೆಯ ಗೆಲುವಿಗೆ ಕಾರಣವಾಗಿದ್ದರು. ಇವರಿಬ್ಬರ ಮದುವೆ ಜನವರಿಯಲ್ಲಿ ನಡೆಯಲಿದೆ.ಸುಜಯ್ ಮತ್ತು ಸೃಷ್ಟಿ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ