ಅರಣ್ಯದಲ್ಲಿರುವ ಸಾಕಷ್ಟು ಸಮಸ್ಯೆಯನ್ನ ಹಂತ ಹಂತವಾಗಿ ನಿವಾರಿಸಲು ಕ್ರಮ: ಸಚಿವ ಆರ್ ಶಂಕರ್

ಧಾರವಾಡ:ಜೂ-29: ರಾಜ್ಯದಲ್ಲಿ ಸಧ್ಯ ೩೮೨ ಅರಣ್ಯ ರಕ್ಷರನ್ನ ತರಬೇತುಗೊಳಿಸಿ ನೇಮಿಸಲಾಗಿದ್ದು, ಅರಣ್ಯದಲ್ಲಿರುವ ಸಾಕಷ್ಟು ಸಮಸ್ಯೆಯನ್ನ ಹಂತ ಹಂತವಾಗಿ ಸಿಬ್ಬಂದಿಗಳನ್ನ ನೇಮಕ ಮಾಡಿ ಅಲ್ಲಿರುವ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಅರಣ್ಯ ಸಚಿವ ಆರ್ ಶಂಕರ್ ಹೇಳಿದ್ದಾರೆ.

ಧಾರವಾಡದ ಗುಂಗರಗಟ್ಟಿಯಲ್ಲಿ ಆಯೋಜಿಸಿದ್ದ ಅರಣ್ಯ ರಕ್ಷಕ ತರಬೇತಾರ್ಥಿಗಳ ನಿಯುಕ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಗಿರುವ ಅರಣ್ಯ ವಾಸಿ ಕುಟುಂಬಗಳಿಗೆ ವಕ್ಕಲೆಬ್ಬಿಸುವ ವಿಚಾರ ತಿಳಿದಿದ್ದು, ಅವರಿಗೆ ಸ್ಥಳಿಯವಾಗಿ ಮೂಲಭೂತ ವ್ಯವಸ್ಥತೆ ಮಾಡಲಾಗುವದು ಎಂದರು.

ಈ ಬಜೆಟ್ ನಲ್ಲಿ ಸಾಕಷ್ಟು ಅನುದಾನವನ್ನ ನನ್ನ ಖಾತೆಗೆ ಕೇಳಿದ್ದೆನೆ ನೀಡುವ ಭರವಸೆಯು ಕೂಡ ಇದೆ ಎಂದರು. ಇನ್ನು ನಮ್ಮದು ಐದು ವರ್ಷ ನಡೆಯುವ ಸರ್ಕಾರ, ಸಿದ್ದರಾಮಯ್ಯರನ್ನ ಮೂಲೆಗುಂಪು ಮಾಡುವದು ಎಲ್ಲಾ ಊಹ ಪೊಹ. ಇದು ಯಾರೋ ಮಾಡ್ತಿರೊ ಪಿತೂರಿಯಾಗದೆ ಎಂದರು.

R Shankar,environment and forest minister,Dharwad

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ