ಶ್ರೀನಗರ, ಆ.12- ಪ್ರತಿ ವರ್ಷ ಈದ್-ಅಲ್-ಅದಾ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ಮತ್ತು ಯೋಧರೊಂದಿಗೆ ಘರ್ಷಣೆಗೆ ಕಾರಣವಾಗುತ್ತಿದ್ದ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ ಸೇರಿದಂತೆ ಅನೇಕ ನಗರಗಳಲ್ಲಿ ಇಂದು ಬಕ್ರೀದ್ ಆಚರಣೆ ಶಾಂತಿಯುತವಾಗಿತ್ತು.
ಬೆಳಗ್ಗೆಯಿಂದಲೇ ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೇನೆ ಕಟ್ಟೆಚ್ಚರ ವಹಿಸಿತ್ತು. ಪ್ರತಿಬಾರಿ ಪ್ರಾರ್ಥನೆ ನಂತರ ಉದ್ರಿಕ್ತ ಗುಂಪು ಯೋಧರತ್ತ ಕಲ್ಲು ತೂರಾಟ ನಡೆಸಿ ಘರ್ಷಣೆಗಿಳಿಯುತ್ತಿದ್ದರು. ಈ ಘಟನೆಗಳಲ್ಲಿ ಸಾವು-ನೋವು ಸಂಭವಿಸುತ್ತಿದ್ದವು.
370ನೆ ವಿಧಿ ರದ್ದತಿ ನಂತರ ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಸೇನೆ ಪಹರೆಯನ್ನು ಬಿಗಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು.