ಪ್ರಪಾತಕ್ಕೆ ಉರುಳಿದ ಬಸ್: 11 ಜನರು ಸಾವು

ಶ್ರೀನಗರ: ಪ್ರಯಾಣಿಕರ ಬಸ್‌ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಪೂಂಚ್‌ ಜಿಲ್ಲೆಯ ಮಂಡಿ ತೆಹ್ಸಿಲ್‌ನ ಪ್ಲೆರಾ ಎಂಬ ಪ್ರದೇಶದಲ್ಲಿ ನಡೆದಿದೆ.

ಬಸ್ ಲೋರಾನ್‌ನಿಂದ ಪೂಂಚ್‌ಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ತಿರುವಿನಲ್ಲಿ ಬಸ್‌ ಚಾಲಕನ ನಿಯಂತ್ರಣ ತಪ್ಪಿರುವುದೇ ಘಟನೆಗೆ ಕಾರಣ ಎಂದು ಅಂದಾಜಿಸಲಾಗಿದೆ.

ಅಪಘಾತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಗಾಯಾಳುಗಳನ್ನು ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ವರೆಗೆ 11 ಶವಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಲೋರಾನ್‌ನಿಂದ ಆಗಮಿಸುತ್ತಿದ್ದ ಬಸ್‌, ಪ್ಲೆರಾದಲ್ಲಿ ನಿಯಂತ್ರಣ ತಪ್ಪಿದೆ. ತಿರುವಿನಲ್ಲಿ ಚಾಲಕನಿಗೆ ರಸ್ತೆಯ ಅಂದಾಜು ಸಿಕ್ಕಿಲ್ಲ. 100 ಮೀಟರ್ ಆಳದ ಕಂದಕಕ್ಕೆ ಬಸ್‌ ಉರುಳಿದೆ ಎಂದು ಹೇಳಿದ್ದಾರೆ.

Jammu and Kashmir, Bus skids off road, falls into gorge in Poonch; 11 killed

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ