ಭಾರತ ಬಾಹ್ಯಾಕಾಶ ವಿಜ್ಞಾನದ ಪಿತಾಮಹಾ-ವಿಕ್ರಂ ಸಾರಾಬಾಯಿ ಅವರ ಜನ್ಮ ಶತಮಾನೋತ್ಸವದ ಹಿನ್ನಲೆ-ಸರ್ಚ್ ಇಂಜಿನ್ ಗೂಗಲ್‍ನಲ್ಲಿ ವಿಶೇಷ ಗೌರವ

ನವದೆಹಲಿ, ಆ. 12- ಖ್ಯಾತ ಖಗೋಳ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಸಂಸ್ಥಾಪಕ ವಿಕ್ರಂ ಸಾರಾಬಾಯಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಸರ್ಚ್ ಇಂಜಿನ್ ಗೂಗಲ್‍ನಲ್ಲಿ ವಿಶೇಷ ಗೌರವ ನೀಡಲಾಗಿದೆ.

ಭಾರತ ಬಾಹ್ಯಾಕಾಶ ವಿಜ್ಞಾನದ ಪಿತಾಮಹಾ ಎಂದೇ ಖ್ಯಾತರಾಗಿರುವ ಸಾರಾಬಾಯಿ ಅವರ ಚಿತ್ರವನ್ನು ಗೂಗಲ್‍ನಲ್ಲಿ ಬಿಂಬಿಸಿ ಅವರ ಸೇವೆಯನ್ನು ಸ್ಮರಿಸಲಾಗಿದೆ.

ಆ. 12. 1919ರಲ್ಲಿ ಜನಿಸಿದ ವಿಕ್ರಂ ಸಾರಾಬಾಯಿ ಅವರು, ಭಾರತೀಯ ಖಗೋಳ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. 1962ರಲ್ಲಿ ಅವರಿಗೆ ಪ್ರತಿಷ್ಠಿತಿ ಶಾಂತಿ ಸ್ವರೂಪ ಭಟ್ಟನಾಗರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಂತರ ಅವರಿಗೆ ಪದ್ಮಭೂಷಣ ಪುರಸ್ಕಾರ ನೀಡಲಾಗಿತ್ತು.

ಇಸ್ರೊ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಕ್ರಂ ಸಾರಾಬಾಯಿ ಅವರು, ಅನೇಕ ಬಾಹ್ಯಾಕಾಶ ಯೋಜನೆಗಳ ರೂವಾರಿಯಾಗಿದ್ದರು. ಡಿ. 30. 1971ರಲ್ಲಿ ಅವರು ನಿಧನರಾದರು. ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ