ಕಾಶ್ಮೀರದ ಕೃಷ್ಣಾ ಘಾಟಿ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್ ಗೆ ಭಾರತದಿಂದ ದಿಟ್ಟ ಉತ್ತರ

ಶ್ರೀನಗರ: ಶಾಂತಿ ಮಾತುಕತೆಗೆ ನಾವು ಸಿದ್ಧ ಎಂದು ಹೇಳುತ್ತಲೇ ಪಾಕಿಸ್ತಾನ ಮತ್ತೆ ಮತ್ತೆ ತನ್ನ ನರಿ ಬುದ್ಧಿ ಪ್ರದರ್ಶಿಸುತ್ತಿದ್ದು, ಗುರುವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಕೃಷ್ಣಾ ಘಾಟಿ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ.

ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಕೃಷ್ಣ ಘಾಟಿ ಸೆಕ್ಟರ್​ನಲ್ಲಿ ಪಾಕಿಸ್ತಾನದ ವಿಮಾನಗಳು ಭಾರತದೊಳಿಗೆ ನುಸುಳಲು ಯತ್ನಿಸಿವೆ. ಈ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ವಾಯುಪಡೆಯ ವಿಮಾನಗಳು ಪಾಕ್​ ವಿಮಾನಗಳನ್ನು ಹಿಮ್ಮೆಟ್ಟಿಸಿವೆ.

ಇನ್ನೊಂದೆಡೆ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಸೇನೆಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

ಬುಧವಾರ ಬೆಳಗ್ಗೆ ಭಾರತದ ವಾಯು ಗಡಿ ದಾಟಿ ಬಂದಿದ್ದ ಮೂರು ಪಾಕ್​ ವಿಮಾನಗಳನ್ನು ನಮ್ಮ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು.

ಈ ಸಂದರ್ಭದಲ್ಲಿ ವಾಯು ಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​​ ಅವರು ಪಾಕ್​ನ ಎಫ್​-16 ವಿಮಾನವನ್ನು ಹೊಡೆದುರುಳಿಸಿದ್ದರು. ಆದರೆ, ಅಭಿನಂದನ್​ ಅವರ ಯುದ್ಧ ವಿಮಾನವನ್ನು ಪಾಕ್​ ಹೊಡೆದುರುಳಿಸಿತ್ತು. ವಿಮಾನದಿಂದ ಹೊರಜಿಗಿದ ಅಭಿನಂದನ್​ ಅವರನ್ನು ಪಾಕ್​ ಸೇನೆ ಬಂಧಿಸಿದೆ.

Jammu And Kashmir, Pakistan violated ceasefire,Krishna Ghati sector

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ