ಅಸ್ಸಾಂನಲ್ಲಿ ಮತ್ತಷ್ಟು ಉಲ್ಬಣಗೊಂಡ ಜಲಪ್ರಳಯ

ಗುವಾಹಟಿ, ಜು.18– ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಜಲಪ್ರಳಯ ಮತ್ತಷ್ಟು ಉಲ್ಬಣಗೊಂಡಿದೆ. ಎಡಬಿಡದೆ ಸುರಿದ ಮಳೆಯಿಂದಾ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸದ್ಯ 31 ಮಂದಿ ಮೃತಪಟ್ಟಿದ್ದಾರೆ.

ಅನೇಕರು ಗಾಯಗೊಂಡಿದ್ದು, ಕೆಲವರು ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಬ್ರಹ್ಮಪುತ್ರ ಸೇರಿದಂತೆ ಉಪನದಿಗಳ ಪ್ರವಾಹದಿಂದ ಮನೆಗಳು, ದೇವಾಲಯಗಳು,ಸೇರಿ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ಲಕ್ಷ ಜನರ ಜಿವನ ಬೀದಿಗೆ ಬಂದಿದೆ. ರಾಜ್ಯದ 33 ಜಿಲ್ಲೆಗಳಲ್ಲಿ 30 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದೆ. 47 ಲಕ್ಷ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ನಾಪತ್ತೆಯಾಗಿರುವವರಿಗೆ ತೀವ್ರ ಶೋಧ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ