ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ನೀತಿ ದರ ಸಂಬಂಧ ಜೂನ್ 4ರಂದು ಪಾಕ್ಷಿಕ ಸಭೆ ನಡೆಸಿತು. ಸಭೆಯ ವರದಿ ನಾಳೆ ಪ್ರಕಟಗೊಳ್ಳಲಿದೆ. ಮೋದಿ ನೇತೃತ್ವದ 2.0 ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಆರ್ಬಿಐ ನಡೆಸಿದ ಮೊದಲ ಸಭೆ ಇದಾಗಿದೆ.
ನಿಧಾನಗತಿಯ ಜಿಡಿಪಿ ಮತ್ತು ಐಎಲ್ ಮತ್ತು ಎಫ್ ಎಸ್ ಮಾರುಕಟ್ಟೆ ಸ್ಥಿರತೆಯಿಂದಾಗಿ ರೆಪೊ ದರವನ್ನು ಕನಿಷ್ಠ 25 ಬೇಸಿಕ್ ಪಾಯಿಂಟ್ ಇಳಿಕೆ ಮಾಡುವ ಸಂಭವವಿದೆ ಎಂದು ಆರ್ಥಿಕ ವಿಶ್ಲೇಷಕರು ಅಂದಾಜಿಸಿದ್ದಾರೆ. ರೆಪೋ ದರ ಇಳಿಕೆಯಿಂದ ಆರ್ಥಿಕತೆಗೆ ಹೆಚ್ಚಿನ ವೇಗ ನೀಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಹಿಂದಿನ ಮೋದಿ ಸರ್ಕಾರದ ಅವಧಿಯಲ್ಲಿ ಆರ್ಬಿಐ ಮತ್ತು ಸರ್ಕಾರದ ನಡುವಿನ ಸಂಬಂಧವು ಹೆಚ್ಚು ಕಾಲದಿಂದಲೂ ವಿವಾದಾತ್ಮಕವಾಗಿಯೇ ಉಳಿದಿದೆ. ಇದೇ ಕಾರಣದಿಂದ ಆರ್ಬಿಐ ಗೌವರ್ನರ್ ಸ್ಥಾನಕ್ಕೆ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ಅವರನ್ನು ನೇಮಿಸಲಾಗಿತ್ತು. ವಿತ್ತೀಯ ನೀತಿ ಸಮಿತಿಗೆ ದಾಸ್ ಅವರೇ ಮುಖ್ಯಸ್ಥರಾಗಿದ್ದಾರೆ. 2019ರಲ್ಲಿ ಎರಡು ಬಾರಿ ರೆಪೋ ದರವನ್ನು ಕಡಿಮೆಮಾಡಲಾಗಿದೆ.
ಕಳೆದ ಏಪ್ರಿಲ್ನಲ್ಲಿ ಎಂಪಿಸಿ ಸಭೆ ನಡೆದಿತ್ತು. ಆ ವೇಳೆಯೂ ರೆಪೋ ದರವನ್ನು 25 ಅಂಶಗಳಷ್ಟು ಇಳಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲಿ 4:2 ಅನುಪಾತದಲ್ಲಿ ರೆಪೋ ದರ ಇಳಿಕೆಗೆ ಬಹುಮತ ವ್ಯಕ್ತವಾದಾಗ ಆಗಲೂ 25 ಬೇಸಿಕ್ ಪಾಯಿಂಟ್ನಷ್ಟು ರೆಪೋ ದರ ಇಳಿಕೆ ಮಾಡಲಾಗಿತ್ತು.