ಮತದಾರರ ಪಟ್ಟಿಯಿಂದ ನಾಪತ್ತೆಯಾದ ತೇಜಸ್ವಿ ಯಾದವ್ ಭಾವಚಿತ್ರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಕೊನೇ ಹಂತದ ಮತದಾನ ವೇಳೆ, ಮತದಾನಕ್ಕೆ ಸಿದ್ಧತೆ ನಡೆಸಿದ್ದ ರಾಷ್ಟ್ರೀಯ ಜನತಾದಳ ನಾಯಕ ತೇಜಸ್ವಿ ಯಾದವ್ ಗೆ ಮತಪಟ್ಟಿಯಲ್ಲಿ ತಮ್ಮ ಭಾವಚಿತ್ರ ನಾಪತ್ತೆಯಾಗಿರುವುದನ್ನು ಕಂಡು ಹೌಹಾರಿದ್ದಾರೆ. ಸ್ಥಳೀಯ ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನಗೊಂಡಿದ್ದಾರೆ.

ಆರ್​ಜಿಡಿ ಮುಖ್ಯಸ್ಥ ತೇಜಸ್ವಿ ಯಾದವ್​ ಅವರ ಫೋಟೋ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಅದಷ್ಟಲ್ಲದೆ ಅವರ ಹೆಸರಿರುವಲ್ಲಿ ಬೇರೆಯೊಬ್ಬರ ಫೋಟೋ ಪ್ರಿಂಟ್​ ಆಗಿದೆ. ಮತದಾನ ಶುರುವಾದ ಬಳಿಕ ಈ ತಪ್ಪು ಬೆಳಕಿಗೆ ಬಂದಿದ್ದು, ತೇಜಸ್ವಿಯವರು ಯಾವುದೇ ಗುರುತಿನ ಚೀಟಿ ತೆಗೆದುಕೊಂಡು ಬಂದರೂ ಮತ ಹಾಕಲು ಅನುವು ಮಾಡಿಕೊಡುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಬಿಹಾರದ ಒಟ್ಟು ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದೆ. ಒಟ್ಟು 15,811 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಎಲ್ಲ ಕೇಂದ್ರಗಳಲ್ಲೂ ಭದ್ರತಾ ಪಡೆಗಳ ಬಿಗಿ ಬಂದೋಬಸ್ತ್​ ಎರ್ಪದಿಸಲಾಗಿದೆ.

lok sabha election,RJD,tejasvi yadav

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ