ನವದೆಹಲಿ:ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀರವ್ ಮೋದಿಯನ್ನು ಬಂಧಿಸಿ ವಾಪಸ್ ಕರೆತರುವ ನಾಟಕವನ್ನು ಬಿಜೆಪಿ ಆಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಲಂಡನ್ ನಲ್ಲಿ ನೀರವ್ ಮೋದಿ ಬಂಧನ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಆಜಾದ್, ದೇಶದಿಂದ ನೀರವ್ ಮೋದಿ ಓಡಿ ಹೋಗಲು ಸಹಾಯ ಮಾಡಿದ್ದ ಬಿಜೆಪಿಯೇ ಇಂದು ಚುನಾವಣೆಗಾಗಿ ಆತನನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ ಎಂದರು.
ಬಿಜೆಪಿಯೇ ನೀರವ್ ಮೋದಿಗೆ ದೇಶ ಬಿಟ್ಟು ಓಡಿ ಹೋಗಲು ಸಹಾಯ ಮಾಡಿತ್ತು. ಆದರೆ ಇಂದು ಅದೇ ಬಿಜೆಪಿ ಚುನಾವಣೆಗಾಗಿ ನೀರವ್ನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ. ಚುನಾವಣೆಯ ಬಳಿಕ ಮತ್ತೆ ನೀರವ್ನನ್ನು ವಾಪಸ್ ಕಳುಹಿಸುತ್ತಾರೆ ಎಂದು ಆರೋಪ ಮಾಡಿದರು.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿ ಇಂಗ್ಲೆಂಡಿನಲ್ಲಿ ತಲೆಮರೆಸಿಕೊಂಡಿದ್ದ ವಜ್ರ ಉದ್ಯಮಿ ನೀರವ್ ಮೋದಿಯನ್ನು ಬಂಧಿಸಲು ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಜೊತೆ ಮಾತುಕತೆ ನಡೆಸಿತ್ತು. ಇದಾದ ಬಳಿಕ ಬ್ರಿಟನ್ನ ವೆಸ್ಟ್ ಮಿನ್ಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಲಂಡನ್ ಪೊಲೀಸರು ನೀರವ್ ಮೋದಿಯನ್ನು ಬಂಧಿಸಿದ್ದರು.
Ghulam Nabi Azad, Congress,Nirav Modi, arrested