ನವದೆಹಲಿ, ಜ.9-ಅಸೋಸಿಯೇಟೆಡ್ ಜರ್ನಲ್ ಲಿಮಿಡೆಟ್(ಎಜೆಎಲ್)ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಆದಾಯ ತೆರಿಗೆ ಇಲಾಖೆಗೆ 100 ಕೋಟಿ ರೂ.ಗಳ ವರಮಾನ ತೆರಿಗೆ ಪಾವತಿಸಬೇಕಿದ್ದು, ಈ ಸಂಬಂಧ ಅವರಿಬ್ಬರಿಗೂ ಐಟಿ ನೋಟಿಸ್ ಜಾರಿಗೊಳಿಸಲಾಗಿದೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಮತ್ತು ಸೋನಿಯಾ ಅನುಕ್ರಮವಾಗಿ 2011-12ರಲ್ಲಿ 155.4 ಕೋಟಿ ರೂ.ಗಳು ಹಾಗೂ 155 ಕೋಟಿ ರೂ.ಗಳ ಘೋಷಿತ ಮತ್ತು ಮೌಲ್ಯಾಂಕನ ಆದಾಯಗಳನ್ನು ನೀಡಬೇಕಿತ್ತು. ಆದರೆ ಅವರ ಘೋಷಿತ ಆದಾಯ ಮತ್ತು ವಾಸ್ತವ ವರಮಾನದ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿಗೊಳಿಸಲಾಗಿದೆ.
ರಾಹುಲ್ ಮತ್ತು ಸೋನಿಯಾ ಘೋಷಿಸಿದ್ದ ವರಮಾನ ವಿವರಗಳ ಈ ಕುರಿತು ಆದಾಯ ತೆರಿಗೆ ಇಲಾಖೆ ಮರು ಮೌಲ್ಯಾಂಕನ ಮಾಡಿ ಹೊಸ ಆದೇಶ ಹೊರಡಿಸಿದೆ. ಅದರಂತೆ ಅವರಿಬ್ಬರೂ ಘೋಷಣೆಯಾಗದ ಇನ್ನೂ 100 ಕೋಟಿ ರೂ.ಗಳ ಆದಾಯವನ್ನು ನೀಡಬೇಕಿದೆ ಎಂದು ಐಟಿ ಇಲಾಖೆಯ ಉನ್ನತ ಮೂಲಗಳು ಹೇಳಿವೆ.
ಈ ಸಂಬಂಧ ರಾಹುಲ್ ಮತ್ತು ಸೋನಿಯಾ ಅವರಿಗೆ ಆದಾಯ ತೆರಿಗೆ ಇಲಾಖೆಯು ಮರು ಮೌಲ್ಯಾಂಕನದ ಆಧಾರದ ಮೇಲೆ ನೀಡಲಾದ ಆದೇಶಾನುಸಾರ ನೋಟಿಸ್ಗಳನ್ನು ನೀಡಲಾಗಿದೆ.
ಈ ಪ್ರಕರಣದ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಜನವರಿ 29ರಂದು ಮುಂದಿನ ವಿಚಾರಣೆ ನಡೆಯಲಿದೆ.