ಅನಾರೋಗ್ಯದ ನಡುವೆಯೂ ಜಿವರಕ್ಷಕ ಸಲಕರಣೆ ಅಳವಡಿಸಿಕೊಂಡೇ ಕಛೇರಿಗೆ ಆಗಮಿಸಿದ ಗೋವಾ ಸಿಎಂ

ಪಣಜಿ: ಅನಾರೋಗ್ಯದ ನಡುವೆಯೂ ನಿರ್ಮಾಣ ಹಂತದ ಸೇತುವೆಗಳ ಪರಿಶೀಲನೆ ನಡೆಸಿದ್ದ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ಈಗ ನಾಲ್ಕು ತಿಂಗಳ ಬಳಿಕ ರಾಜ್ಯ ಸಚಿವಾಲಯಕ್ಕೆ ಭೇಟಿ ನೀಡಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದರು.

ಜೀವ ರಕ್ಷಕ ಸಲಕರಣೆಗಳನ್ನು ಅಳವಡಿಸಿಕೊಂಡೇ ಕಚೇರಿಗೆ ಆಗಮಿಸಿದ ಅವರನ್ನು ಸಂಪುಟ ಸಹೋದ್ಯೋಗಿಗಳು, ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಬೆಳಗ್ಗೆ 10.45ರಲ್ಲಿ ಅವರು ಕಚೇರಿಗೆ ಆಗಮಿಸಿದರು. ಸುತ್ತಲೂ ನೆರೆದಿದ್ದ ಜನರ ಕಡೆಗೆ ಮಂದಹಾಸವೊಂದನ್ನು ಬೀರಿದ ಅವರು ಕಚೇರಿಯ ಒಳಗೆ ನಡೆದು ಸಾಗಿದರು.

ಇದೇ ವೇಳೆ ರಾಜ್ಯದಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಮತ್ತು ಬಡ್ತಿ ವಿಚಾರವಾಗಿ ಸಿಬ್ಬಂದಿ ಮತ್ತು ಒಳಾಡಳಿತ ಇಲಾಖೆಯೊಂದಿಗೆ ಚರ್ಚೆ ನಡೆಸಿದರು.

ಪ್ಯಾಂಕ್ರಿಯಾಟಿಕ್​ (ಮೇದೋಜೀರಕಾಂಗ ಗ್ರಂಥಿಯ) ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಮೊದಲಿಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ದೆಹಲಿಯ ಏಮ್ಸ್ ​ಗೆ ದಾಖಲಾಗಿದ್ದರು. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಗೋವಾದ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

Goa CM,Manohar Parrikar, New Year: A visit to his office after four months

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ