ಅತ್ತೆ ಕಾಟಕ್ಕೆ ಬೇಸತ್ತ ಅಳಿಯ: ಕುಟುಂಬದ 6 ಜನರನ್ನು ಗುಂಡಿಟ್ಟು ಹತ್ಯೆಗೈದ

ಬ್ಯಾಂಕಾಕ್‌: ಅತ್ತೆಯ ಕಾಟದಿಂದ ಬೇಸತ್ತ ವ್ಯಕ್ತಿಯೊಬ್ಬ ಹೊಸವರ್ಷದ ಮುನ್ನಾದಿನದ ಪಾರ್ಟಿ ವೇಳೆ ತನ್ನಿಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಜನರನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬ್ಯಾಂಕಾಕ್ ನಲ್ಲಿ ನಡೆದಿದೆ.

ಸುಚಿಪ್ ಸಾರ್ನ್ಸುಂಗ್ ಎಂಬಾತ ದಕ್ಷಿಣ ಪ್ರಾಂತ್ಯದ ಚಮ್ಫೋನ್‌ನಲ್ಲಿ ಹೊಸ ವರ್ಷಾಚರಣೆಗೆಂದು ಪತ್ನಿ ಕುಟುಂಬದೊಂದಿಗೆ ಸೇರಿಕೊಂಡಾಗ ಮಧ್ಯರಾತ್ರಿ ವೇಳೆಗೆ ಸತತ 10 ನಿಮಿಷ ಸಾಮೂಹಿಕವಾಗಿ ಶೂಟ್‌ ಮಾಡಿದ್ದಾನೆ.

ಪಾತೊ ಜಿಲ್ಲೆಯಲ್ಲಿನ ಬ್ಯೂಟಿ ಪಾರ್ಲರ್‌ನಲ್ಲಿ ಪಾರ್ಟಿಯನ್ನು ಏರ್ಪಡಿಸಲಾಗಿತ್ತು. ಸುಚಿಪ್‌ ತನ್ನಲ್ಲಿದ್ದ ಪಿಸ್ತೂಲ್‌ ಅನ್ನು ಹೊರ ತೆಗೆದು ಟೇಬಲ್‌ ಮೇಲಿಟ್ಟು ಚೆನ್ನಾಗಿ ಕುಡಿದಿದ್ದಾನೆ. ಬಳಿಕ ಏಕಾಏಕಿ ತನ್ನ ಕುಟುಂಬದವರ ಮೇಲೆ ಗುಂಡಿನ ಮಳೆಗರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

9 ವರ್ಷದ ಮಗ ಮತ್ತು 6 ವರ್ಷದ ಮಗಳು ಸೇರಿ ಹತ್ಯೆಯಾದ ಎಲ್ಲರೂ ಸುಚಿಪ್‌ ಕುಟುಂಬಕ್ಕೆ ಸೇರಿದವರಾಗಿದ್ದರು. ತನ್ನ ಅತ್ತೆಯ ಮೇಲೆ ಕೋಪಗೊಂಡಿದ್ದ ಆತ ತಮ್ಮನ್ನು ಹೆಂಡತಿಯ ಕುಟುಂಬದವರು ಸ್ವಾಗತಿಸಲಿಲ್ಲ ಎಂದು ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

Thai Man Guns Down 6 Family Members, Including Kids At New Year Party

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ