ನವದೆಹಲಿ: ಶೀಘ್ರದಲ್ಲೇ ಹೊಸ ರೂಪದ 20 ರೂಪಾಯಿ ನೋಟನ್ನು ಬಿಡುಗಡೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಜ್ಜಾಗಿದ್ದು, ಅದರಲ್ಲಿ ಕೆಲವು ವೈಶಿಷ್ಟ್ಯತೆಗಳು ಇರಲಿವೆ.
500 ರೂ, 1000 ರೂಪಾಯಿ ನೋಟುಗಳ ಅಪಮೌಲ್ಯೀಕರಣವಾದ ಬಳಿಕ ಆರ್ಬಿಐ ಹೊಸ ಮಾದರಿಯಲ್ಲಿ 10 ರೂ, 50, 500 ರೂಪಾಯಿಗಳ ನೋಟನ್ನು ಮುದ್ರಿಸಿದೆ. ಹಾಗೇ 200 ರೂ. ಮತ್ತು 2000 ರೂಪಾಯಿಗಳ ನೋಟುಗಳೂ ಚಾಲ್ತಿಯಲ್ಲಿ ಬಂದಿವೆ. ಹಳೇ ನೋಟುಗಳಿಗೆ ಹೋಲಿಸಿದರೆ ಇವುಗಳ ವಿನ್ಯಾಸ, ಅಳತೆಯಲ್ಲಿ ತುಂಬ ವ್ಯತ್ಯಾಸವಿದೆ.
ಈಗ 20 ರೂಪಾಯಿ ನೋಟು ಕೂಡ ಶೀಘ್ರದಲ್ಲೇ ಹೊಸದಾಗಿ ಚಾಲ್ತಿಯಲ್ಲಿ ಬರಲಿದೆ. 2016ರ ಮಾರ್ಚ್ 31ರಲ್ಲಿ ಸುಮಾರು 4.92 ಬಿಲಿಯನ್ಗಳಷ್ಟು 20 ರೂಪಾಯಿ ನೋಟುಗಳ ಪ್ರಸರಣವಿತ್ತು. 2018ರ ಮಾರ್ಚ್ನಲ್ಲಿ ಪ್ರಸರಣ ದ್ವಿಗುಣಕ್ಕೂ ಹೆಚ್ಚಾಗಿದ್ದು, 10 ಬಿಲಿಯನ್ ನೋಟುಗಳು ಸರ್ಕ್ಯೂಲೆಟ್ ಆಗುತ್ತಿವೆ ಎಂದು ಬ್ಯಾಂಕ್ ದಾಖಲೆ ತಿಳಿಸಿದೆ.
ಒಟ್ಟಾರೆ ನೋಟುಗಳ ಪ್ರಸರಣದಲ್ಲಿ ಶೇ.9.8ರಷ್ಟು 20 ರೂಪಾಯಿ ನೋಟುಗಳ ಪ್ರಸರಣವಿದೆ ಎನ್ನಲಾಗಿದೆ.
RBI,New 20 Rupee Note,