ಮಿಜೋರಾಮ್ ನೂತನ ಸಿಎಂ ಆಗಿ ಜೊರ್ಮಾತಂಗಾ ಪ್ರಮಾಣ ವಚನ ಸ್ವೀಕಾರ

ಐಜ್ವಾಲ್ : ಈಶಾನ್ಯ ರಾಜ್ಯ ಮಿಜೋರಾಮ್​ನ ನೂತನ ಮುಖ್ಯಮಂತ್ರಿಯಾಗಿ ಮಿಜೋರಾಂ ನ್ಯಾಷನಲ್​ ಫ್ರಂಟ್​ನ ಮುಖ್ಯಸ್ಥ ಜೊರ್ಮಾತಂಗಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜೊರ್ಮಾತಂಗಾ ಅವರು ಮೂರನೇ ಬಾರಿಗೆ ಮಿಜೋರಾಂನ ಮುಖ್ಯಮಂತ್ರಿಯಾಗಿದ್ದು, ಇದಕ್ಕೂ ಮೊದಲು 1998ರಿಂದ 2008ರ ವರೆಗೆ ಸತತ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

ಡಿ.11ರಂದು ಹೊರಬಿದ್ದಿದ್ದ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಮಿಜೋರಾಂ ನ್ಯಾಷನಲ್​ ಫ್ರಂಟ್​ ಆಡಳಿತಾರೂಢ ಕಾಂಗ್ರೆಸ್​ ವಿರುದ್ಧ ತ್ರಿವಿಕ್ರಮ ಮೆರೆದಿತ್ತು. 40 ವಿಧಾನಸಭೆ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳನ್ನು ಎಂಎನ್​ಎಫ್​ ತನ್ನದಾಗಿಸಿಕೊಂಡಿತ್ತು. ಆ ಮೂಲಕ ಹತ್ತು ವರ್ಷಗಳ ಕಾಂಗ್ರೆಸ್​ ಆಡಳಿತವನ್ನು ಎಂಎನ್​ಎಫ್​ ಕೊನೆಗೊಳಿಸಿತ್ತು. ಅಷ್ಟೇ ಅಲ್ಲ, ಮಿಜೋರಾಂ ಅನ್ನು ಸೋಲುವ ಮೂಲಕ ಈಶಾನ್ಯ ರಾಜ್ಯಗಳ ತನ್ನ ಕೊನೆ ನೆಲೆಯನ್ನೂ ಕಾಂಗ್ರೆಸ್​ ಕಳೆದುಕೊಂಡಿತ್ತು.

Mizoram,Mizo National Front leader, Zoramthanga, takes oath,Chief Minister

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ