ಶ್ರೀಲಂಕಾ ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಅಂತ್ಯ್ಗೊಂಡಿದ್ದು, ಇಂದು ರಾನಿಲ್ ವಿಕ್ರಮಸಿಂಘೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿಸುವ ಮೂಲಕ ಮತ್ತೊಮ್ಮೆ ಶ್ರೀಲಂಕಾ ಪ್ರಧಾನಿ ಪಟ್ಟಕ್ಕೇರಿದ್ದಾರೆ.

ಹಠಾತ್ ಬೆಳವಣಿಗೆಯಲ್ಲಿ ಅ.26ರಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಪ್ರಧಾನಿ ವಿಕ್ರಮಸಿಂಘೆಯನ್ನು ಪದಚ್ಯುತಗೊಳಿಸಿದ್ದರು. ಇದೇ ದೇಶಾದ್ಯಂತ ರಾಜಕೀಯ ತಲ್ಲಣಕ್ಕೆ ಕಾರಣವಾಗಿತ್ತು. ಆದರೆ ಇದೀಗ ಮತ್ತೆ 69 ವರ್ಷದ ಹಿರಿಯ ನಾಯಕ ಸಿಂಘೆ ಅವರು ರಾಜ್ಯಪಾಲ ಮೈತ್ರಿಪಾಲ ಸಿರಿಸೇನಾ ಅವರಿಂದ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಮೂಲಕ ದ್ವೀಪ ರಾಷ್ಟ್ರದಲ್ಲಿ ಏಳು ವಾರಗಳಿಂದಲೂ ಉಂಟಾಗಿದ್ದ ರಾಜಕೀಯ ಅಸ್ಥಿರತೆ ಅಂತ್ಯಗೊಂಡಿದೆ.

ತಮ್ಮನ್ನು ಪದಚ್ಯುತಿಗೊಳಿಸಿ ಮಹಿಂದಾ ರಾಜಪಕ್ಸ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಿಸಿದಂದಿನಿಂದಲೂ ಹಿಂದೆ ಸರಿಯಲು ನಿರಾಕರಿಸಿದ್ದ ಸಿಂಘೆ ಅವರು ಅಧ್ಯಕ್ಷರ ನಿರ್ಧಾರವನ್ನು ಪ್ರಶ್ನಿಸಿ ತಮ್ಮ ಯುನೈಟೆಡ್​ ನ್ಯಾಷನಲ್​ ಪಾರ್ಟಿ ಸೇರಿ ಪ್ರಮುಖ 10 ಪಕ್ಷಗಳೊಂದಿಗೆ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು.

ಪ್ರಮಾಣವಚನ ಕಾರ್ಯಕ್ರಮದಿಂದ ಮಾಧ್ಯಮಗಳನ್ನು ಹೊರಗಿಟ್ಟಿರುವ ಅಧ್ಯಕ್ಷ ಸಿರಿಸೇನಾ ನಿರ್ಧಾರದಿಂದಾಗಿ ಪ್ರಧಾನಿಯಾಗಿ ವಿಕ್ರಮ್‌ಸಿಂಘೆ ಅವರು ಅಧಿಕಾರ ಸ್ವೀಕರಿಸಿರುವ ಕುರಿತು ಅವರ ಶಾಸಕಾಂಗವು ಈ ವಿಚಾರವನ್ನು ಬಹಿರಂಗಗೊಳಿಸಿದೆ.

ಪ್ರಧಾನಿಯಾಗಿ ನೇಮಕಗೊಂಡ ಬಳಿಕ ರಾಜಪಕ್ಸ ಅವರು ಸಂಸತ್ತಿನಲ್ಲಿ ವಿಶ್ವಾಸಮತ ಸಾಭೀತುಪಡಿಸಲು ಸತತ ಆರು ಬಾರಿ ವಿಫಲಗೊಂಡಿದ್ದರು. ಹಾಗಾಗಿ ಶುಕ್ರವಾರವಷ್ಟೇ ಬಹುಮತ ಸಾಬೀತುಪಡಿಸದ ಹೊರತು ರಾಜಪಕ್ಸ ಮತ್ತು ಸಂಪುಟ ಸಚಿವರು ಕಾರ್ಯನಿರ್ವಹಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಹಾಗಾಗಿ ರಾಜಪಕ್ಸ ರಾಜೀನಾಮೆ ಸಲ್ಲಿಸುವ ನಿರ್ಧಾರವನ್ನುಪ್ರಕಟಿಸಿದ್ದರು. ಇದರ ಬೆನ್ನಲ್ಲೇ ರಾಜಪಕ್ಸ ರಾಜೀನಾಮೆ ನೀಡಿದ್ದರು. ಈ ಹಿನ್ನಲೆಯಲ್ಲಿ ವಿಕ್ರಮ ಸಿಂಗೆಯವರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಸಿರಿಸೇನಾ ಅನುಮತಿ ನೀಡಿದ್ದರು.

Ranil Wickremesinghe, takes oath, as Sri Lanka’s Prime Minister

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ