ಶ್ರೀಲಂಕಾ: ಮಹಿಂದಾ ರಜಪಕ್ಷೆ ರಾಜೀನಾಮೆ: ಮತ್ತೆ ಪ್ರಧಾನಿ ಪಟ್ಟಕ್ಕೇರಲಿರುವ ವಿಕ್ರಮ ಸಿಂಘೆ

ಕೊಲೊಂಬೊ: ಕಳೆದ ಎರಡು ತಿಂಗಳಿನಿಂದ ಶ್ರೀಲಂಕಾದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟ ಕೊನೆಗೂ ಅಂತ್ಯಗೊಂಡಿದ್ದು, ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ರನಿಲ್ ವಿಕ್ರಮ ಸಿಂಘೆಯವರೇ ದ್ವೀಪರಾಷ್ಟ್ರದ ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕರಿಸುವುದು ಖಚಿತವಾಗಿದೆ.

ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಶನಿವಾರ ಬೆಳಗ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ, ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ವಜಾಗೊಂಡಿದ್ದ ರನಿಲ್​ ವಿಕ್ರಮ ಸಿಂಘೆ ಅವರು ಮತ್ತೆ ಶ್ರೀಲಂಕಾದ ಪ್ರಧಾನಿಯಾಗಲಿದ್ದಾರೆ. ನಾಳೆ ಸಿಂಘೆ ಶ್ರೀಲಂಕಾ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.

ವಿಕ್ರಮ ಸಿಂಘೆ ಅಧಿಕಾರಕ್ಕೇರಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೇ ಸಮ್ಮತಿಸಿದ್ದಾರೆ ಎಂದುಹೇಲಲಾಗುತ್ತಿದೆ. ದೂರವಾಣಿ ಮೂಲಕ ಇಬ್ಬರೂ ನಾಯಕರ ನಡುವೆ ನಡೆದ ಸಮಾಲೋಚನೆ ನಂತರ ವಿಕ್ರಮ ಸಿಂಘೆ ಅವರಿಗೆ ಮರಳಿ ಅಧಿಕಾರ ವಹಿಸಲು ನಿರ್ಧರಿಸಲಾಗಿದೆ ಎಂದು ಯುನೈಟೆಡ್​ ನ್ಯಾಷನಲ್​ ಪಕ್ಷದ ಮುಖಂಡರು ತಿಳಿಸಿದ್ದಾರೆ.

ಅಕ್ಟೋಬರ್​ 26ರಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ವಿಕ್ರಮ ಸಿಂಘೆ ಅವರನ್ನು ಅಧಿಕಾರದಿಂದ ವಜಾ ಮಾಡಿ, ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದರು. ಅಂದಿನಿಂದ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಮನೆ ಮಾಡಿತ್ತು. ಮಹಿಂದಾ ರಾಜಪಕ್ಸೆ ಅವರ ರಾಜೀನಾಮೆ ಮೂಲಕ ಆ ಅಸ್ಥಿರತೆ ಕೊನೆಗೊಂಡಿದೆ.

Mahinda Rajapaksa,Resigns, As Sri Lanka PM, Ranil Wickremesinghe To Return

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ