ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಆರಂಭವಾದ ರೈತರ ಪ್ರತಿಭಟನೆ

ನವದೆಹಲಿ: ರೈತರ ಸಾಲ ಮನ್ನಾ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ಸಮಿತಿ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳ ರಾಷ್ಟ್ರ ರಾಜಧಾನಿ ಮತ್ತೆ ಬೀಡು ಬಿಟ್ತಿದ್ದು, ಒಂದು ಲಕ್ಷಕ್ಕೂ ಅಧಿಕ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎಐಕೆಎಸ್ ಸಿಸಿ) ಎರಡು ದಿನಗಳ ಕಾಲ ದೆಹಲಿಯಲ್ಲಿ ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ದೇಶದ ನಾನಾಭಾಗಗಳಿಂದ ರೈತರು ಆಗಮಿಸಿದ್ದು, 200ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ದೆಹಲಿ, ಹಸ್ರತ್ ನಿಜಾಮುದ್ದೀನ್, ಬಿಜ್ವಾಸನ್, ಸಬ್ಜಿ ಮಂಡಿ ನಿಲ್ದಾಣ, ಎಎನ್ ವಿಟಿ ನಿಲ್ದಾಣ ಮತ್ತು ಮಂಜು ಕ ಟಿಕ್ಲಾದಿಂದ ರಾಮ್ ಲೀಲಾ ಮೈದಾನದವರೆಗೆ ಸಾಗಲಿದ್ದಾರೆ.

ಇನ್ನು ದೆಹಲಿಯಲ್ಲಿ ನಡೆಯುತ್ತಿರುವ 2 ದಿನಗಳ ಕಿಸಾನ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತಲೆಬುರುಡೆಗಳನ್ನು ಹಿಡಿದು ದೆಹಲಿಗೆ ಆಗಮಿಸಿರುವ ತಮಿಳುನಾಡು ರೈತರು, ಸಂಸತ್ತಿಗೆ ಹೋಗುವುದನ್ನು ತಡೆಹಿಡಿದಿದ್ದೇ ಆದರೆ, ಬೆತ್ತಲೆಗೊಂಡು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ನ್ಯಾಷನಲ್ ಸೌತ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಅಗ್ರಿಕಲ್ಚರ್ಸ್ ಅಸೋಸಿಯೇಶನ್’ನ 1,200 ಸದಸ್ಯರು ಈಗಾಗಲೇ ರಾಜಧಾನಿ ದೆಹಲಿ ತಲುಪಿದ್ದಾರೆ.
ಸಾವಿರಾರು ರೈತರು ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶುಕ್ರವಾರ ಈ ರೈತರು ಸಂಸತ್ತಿಗೆ ತೆರಳುತ್ತಾರೆ. ಪ್ರತಿಭಟನೆ ವೇಳೆ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ರೈತರು ಆಗ್ರಹಿಸಲಿದ್ದಾರೆ.

ತಿರುಚಿ ಹಾಗೂ ಕರೂರಿನಲ್ಲಿಯೂ ಸಂಘಟನೆಗೆ ಸೇರಿದ ಹಲವಾರು ರೈತರಿದ್ದು, ಎಲ್ಲಾ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ರೈತ ಮುಖಂಡ ಅಯ್ಯಕನ್ನು ಅವರು ಕರೆ ನೀಡಿದ್ದಾರೆ. ರೈತರ ಸಾಲ ಮನ್ನಾ, ಬೆಲ ನಿಗದಿ, ರೈತರಿಗೆ ತಿಂಗಳಿಗೆ ರೂ.5,000 ಪಿಂಚಣಿ ನೀಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದಿದ್ದಾರೆ. ಪ್ರತಿಭಟನೆಯಲ್ಲಿ ರೈತರ ನಾಯಕರು ಹಾಗೂ ಸಂಘಟನೆಗೆ ಸೇರಿದ ಇಬ್ಬರು ಎರಡು ತಲೆಬುರುಡೆಗಳನ್ನು ಹಿಡಿದು ಪ್ರತಿಭಟನೆಯನ್ನು ಭಾಗವಹಿಸಿದ್ದಾರೆ. ಸಾಲ ಮನ್ನಾ ಮಾಡಲು ಸಾಧ್ಯವಾಗದೆ ನಮ್ಮೊಂದಿಗಿದ್ದ ಇಬ್ಬರು ರೈತರು ಆತ್ಮಹತ್ಯೆಗ ಶರಣಾಗಿದ್ದರು. ಆ ಇಬ್ಬರು ರೈತರ ತಲೆಬುರುಡೆಗಳಿವು ಎಂದು ಹೇಳಿದ್ದಾರೆ.

Farmers Protest,All India Kisan Sangharsh Coordination Committee (AIKSCC), Delhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ