ಪೊಲೀಸ್ ಪ್ರಧಾನ ಕಚೇರಿಯ​ ಕಟ್ಟಡದಿಂದಲೇ ಹಾರಿ ಆತ್ಮಹತ್ಯೆಗೆ ಶರಣಾದ ಹಿರಿಯ ಪೊಲೀಸ್ ಅಧಿಕಾರಿ

ನವದೆಹಲಿ: ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಪ್ರಧಾನ ಕಚೇರಿಯ​ ಕಟ್ಟದ 10ನೇ ಮಹಡಿಯಿದಲೇ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪ್ರೇಮ್​ ಬಲ್ಲಭ್​(53) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್​ ಅಧಿಕಾರಿ. ಇವರು ಕಳೆದ 28 ದಿನಗಳಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಬಲ್ಲಭ್​ ಅವರು ಸಹಾಯಕ ಪೊಲೀಸ್​ ಆಯುಕ್ತರಾಗಿದ್ದು(ACP), ದೆಹಲಿಯ ಕೇಂದ್ರ ಭಾಗದಲ್ಲಿರುವ ಐಟಿಒ ಪ್ರದೇಶದ ಪೊಲೀಸ್​ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಪೊಲೀಸ್​ ಪ್ರಧಾನ ಕಚೇರಿ ಬಳಿ ನಿಯೋಜನೆಗೊಂಡಿದ್ದ ಪೊಲೀಸ್​ ಸಿಬ್ಬಂದಿ ಜೋರಾದ ಶಬ್ಧವನ್ನು ಕೇಳಿ ಹೋಗಿ ನೋಡಲು ಕಚೇರಿಯ ಪ್ರವೇಶ ದ್ವಾರದ ಬಳಿ ಬಲ್ಲಭ್​ ಅವರು ಬಿದ್ದಿರುವುದನ್ನು ಕಂಡುಬಂದಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ.

ದೆಹಲಿಯ ಅಪರಾಧ ಹಾಗೂ ಸಂಚಾರಿ ವಿಭಾಗಗಳಲ್ಲೂ ಬಲ್ಲಭ್​ ಕಾರ್ಯನಿರ್ವಹಿಸಿದ್ದಾರೆ. 1986ರಲ್ಲಿ ದೆಹಲಿ ಪೊಲೀಸ್​ ಹುದ್ದೆಗೆ ಸೇರಿದ ಅವರು 2016ರಲ್ಲಿ ಎಸಿಪಿಯಾಗಿ ಬಡ್ತಿ ಪಡೆದಿದ್ದರು.

Senior Delhi Cop Battling Depression Jumps Off 10th Floor Of Headquarters

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ