ಹೊಸದಿಲ್ಲಿ: ಕೇಂದ್ರ ಸರಕಾರ ನೂತನವಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳು ಮುಂದಿಟ್ಟಿರುವ ಹೊಸ ಸುಧಾರಣೆಗಳನ್ವಯ, ಜಾಗತಿಕ ನಿಯಮಗಳಿಗೆ ಅನುಗುಣವಾಗಿ ಉತ್ಪಾದಕತೆಯನ್ನು ಹೆಚ್ಚಿಸಿದ್ದೇ ಆದಲ್ಲಿ, ಆಹಾರ ರಫ್ತು ರಂಗದಲ್ಲಿ ಭಾರತವೊಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ.
ಹೀಗೆಂದು ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಾಹಕ ಅಕಾರಿ ಅಮಿತಾಭ್ ಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿಂದು ಒಟ್ಟು ಆಹಾರೋತ್ಪಾದನೆಯ ಕೇವಲ ಶೇ. 10ಕ್ಕಿಂತಲೂ ಕಡಿಮೆ ಉತ್ಪನ್ನಗಳನ್ನು ಮಾತ್ರವೇ ದೇಶ ಸಂಸ್ಕರಿಸುತ್ತಿದೆ ಮತ್ತು ಸೂಕ್ತ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯ ಕೊರತೆ ಕಾರಣ ವೇಸ್ಟೇಜ್‍ನಿಂದಾಗಿ ವರ್ಷವೂ 90,000ಕೋ.ರೂ.(12.3ಬಿಲಿಯನ್ ಡಾಲರ್)ಮೊತ್ತ ದೇಶಕ್ಕೆ ನಷ್ಟವಾಗುತ್ತಿದೆ ಎಂದು ಕಾಂತ್ ಬೊಟ್ಟು ಮಾಡಿದ್ದಾರೆ.
ದೂರಗಾಮಿ ಪರಿಣಾಮ
ಅಂದ ಹಾಗೆ , ವಿಪಕ್ಷಗಳ ವಿರೋಧಗಳ ನಡುವೆಯೇ ನರೇಂದ್ರ ಮೋದಿ ಸರಕಾರ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿರುವ ಮೂರು ಕೃಷಿ ಕಾಯಿದೆಗಳು ದೂರಗಾಮಿ ಪರಿಣಾಮಗಳನ್ನು ಹೊಂದಿವೆ.
ಸರಕಾರದ ದಿಟ್ಟ ಕ್ರಮ
ಕೃಷ್ಯುತ್ಪನ್ನಗಳ ಮಾರಾಟಕ್ಕಾಗಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕೇಂದ್ರ ಸರಕಾರದ ದಿಟ್ಟ ಕ್ರಮ. ಸುಮಾರು 137ಕೋಟಿ ಜನರಲ್ಲಿ ಅರ್ಧದಷ್ಟು ಜನರ ಮೇಲೆ ನೇರ ಪರಿಣಾಮ ಬೀರುವಂತಹ ವ್ಯವಸ್ಥೆಯೊಂದರ ಹೃದಯ ಭಾಗಕ್ಕೇ ನಾಟುವಂತಹ ಉಪಕ್ರಮವಿದು. ಅಂದರೆ ಕೃಷಿ ಬೆಳೆಗಳ ಮಾರಾಟ ವ್ಯವಸ್ಥೆಯನ್ನು ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಮುಕ್ತಗೊಳಿಸಿ ರೈತರಿಗೇ ಪೂರ್ಣ ಸ್ವಾತಂತ್ರ್ಯ ನೀಡಿ, ಸಂಪೂರ್ಣ ಸ್ವಾವಲಂಬಿಗಳಾಗಿ ಪರಿವರ್ತಿಸುವುದು ಪರಿಷ್ಕøತ ಕಾಯ್ದೆಗಳ ಆಶಯ. ಕೇಂದ್ರ ಸರಕಾರದ ಪ್ರಸ್ತುತ ಪ್ರಯತ್ನಗಳು ಕೈಗೂಡಿದಲ್ಲಿ ಭಾರತವು ತನ್ನ ಪ್ರಜೆಗಳಿಗೆ ಆಹಾರ ಉಣಿಸುವುದಷ್ಟೇ ಅಲ್ಲ, ವಿಶ್ವದ ದೇಶಗಳಿಗೆ ಆಹಾರ ರಫ್ತು ಮಾಡುವ ಪ್ರಮುಖ ರಾಷ್ಟ್ರವಾಗಿ ರಾರಾಜಿಸಲಿದೆ.
ಬೇಕು ಖಾಸಗಿ ಹೂಡಿಕೆ
ಭಾರತೀಯ ಕೃಷಿರಂಗವು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಬಲ ಪೈಪೆÇೀಟಿ ನೀಡಲು ಶಕ್ತವಾಗಬೇಕಾದರೆ, ಕೃಷಿರಂಗಕ್ಕೆ ಅಗತ್ಯ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ರಂಗದಲ್ಲಿ ಖಾಸಗಿ ಹೂಡಿಕೆ ಅಗತ್ಯ . ಪರಿಷ್ಕøತ ಕಾಯಿದೆಗಳ ಬಗ್ಗೆ ಎದ್ದಿರುವ ಅನಗತ್ಯ ವದಂತಿ- ವಿವಾದಗಳ ವಿರುದ್ಧ ಜಯಿಸಬೇಕಾದರೆ ಸರಕಾರ ತನ್ನ ಧ್ಯೇಯವನ್ನು ತುಂಬ ಸ್ಪಷ್ಟವಾಗಿ ವಿಶದಪಡಿಸಬೇಕಿದೆ . ಯಾಕೆಂದರೆ, ದೇಶದ ಜನಸಂಖ್ಯೆಯ ಬಹಳಷ್ಟು ನೊಂದ ಜನರ ಮೇಲೆ ಪೂರಕ ಪರಿಣಾಮ ಬೀರಲಿರುವ ಪ್ರಧಾನ ನೀತಿ ಪರಾಮರ್ಶೆಯಾಗಿವೆ ಪರಿಷ್ಕøತ ಕಾಯ್ದೆಗಳು ಎನ್ನುತ್ತಾರೆ ನ್ಯಾಷನಲ್ ಕೊಲ್ಯಾಟರಲ್ ಮೆನೇಜ್‍ಮೆಂಟ್ ಸರ್ವಿಸಸ್ ಲಿ.ನ ಆಡಳಿತ ನಿರ್ದೇಶಕ ಸಿರಾಜ್ ಚೌಧರಿ.
ದೇಶದ ಸಮಗ್ರ ಅಭ್ಯುದಯ-ಸ್ವಾವಲಂಬನೆ ನಿಟ್ಟಿನಲ್ಲಿ ಪರಿಣಾಮಕಾರಿ ನೀತಿ ನಿಯಮ ರೂಪಿಸುವಲ್ಲಿ ಪ್ರಧಾನಿ ಮೋದಿಯವರು ಮುನ್ನಡೆಯಲ್ಲಿದ್ದಾರೆ. ಈ ಪೈಕಿ ನೋಟು ಅಮಾನ್ಯೀಕರಣ, 1947ರ ನಂತರದಲ್ಲಿ ಪ್ರಥಮ ಬಾರಿಗೆ ಭಾರೀ ತೆರಿಗೆ ಸುಧಾರಣೆ, ಜಗತ್ತನ್ನೇ ಅಲ್ಲಾಡಿಸಿರುವ ಕೊರೋನಾ ವೈರಸ್ ಪ್ರಸರಣ ನಿಯಂತ್ರಣಕ್ಕೆ ಕೈಗೊಂಡ ಲಾಕ್‍ಡೌನ್ ಉಪಕ್ರಮ ಹೀಗೆ ಎಲ್ಲವೂ ಪರಿಣಾಮಕಾರಿ. ಇವುಗಳ ಜತೆ ಹೋಲಿಸಿದರೆ ಕೃಷ್ಯುತ್ಪನ್ನಗಳ ಖರೀದಿ, ಮಾರಾಟ ಮತ್ತು ದಾಸ್ತಾನು ವ್ಯವಸ್ಥೆಗೆ ಸಂಬಂಧಪಟ್ಟ ಕಾಯಿದೆಗಳ ತಿದ್ದುಪಡಿ ಉಗ್ರ ಕ್ರಮವಲ್ಲ ಎನ್ನುತ್ತಾರೆ ಕಾಂತ್.
ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ
ರೈತರು ನಾನಾ ಕಾರಣಗಳಿಂದ ಕನಿಷ್ಠ ಬೆಲೆಗೆ ಬೆಳೆಗಳನ್ನು ಮಾರಿ ಕೈಸುಟ್ಟುಕೊಳ್ಳುವುದನ್ನು ತಪ್ಪಿಸಲು, ಸರಕಾರವೇ ಸುಮಾರು 2ಡಜನ್ ಬೆಳೆಗಳಿಗೆ ದರ ನಿಗದಿ ವ್ಯವಸ್ಥೆ ರೂಪಿಸುತ್ತದೆ ಮತ್ತು ಈ ಪೈಕಿ ಅಕ್ಕಿ, ಗೋಯ ಜೊತೆ ಕೆಲವು ಎಣ್ಣೆಬೀಜ, ದ್ವಿದಳ ಧಾನ್ಯಗಳನ್ನು ಖರೀದಿಸುತ್ತದೆ. ಸುಮಾರು 500,000 ಮೀರಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ಈ ಧಾನ್ಯಗಳನ್ನು ಬಡವರಿಗೆ ಹಂಚಿಕೆ ಮಾಡಲು, ಲಭ್ಯವಿರುವ ಧಾರಾಳ ಸಬ್ಸಿಡಿಗಳು ನೆರವಾಗುತ್ತವೆ. ಭಾರತದಲ್ಲಿ ನಿಜಕ್ಕೂ ಇದೊಂದು ತೀರಾ ಭಾವನಾತ್ಮಕ ವಿಚಾರ.
ಗುತ್ತಿಗೆ ಕೃಷಿಗೆ
ಬೇಕು ಉತ್ತೇಜನ
ಕಡಿಮೆ ಇಳುವರಿ, ಅಸಮರ್ಪಕ ಸಣ್ಣ ಹಿಡುವಳಿ ಇತ್ಯಾದಿಗಳಿಂದ ನಲುಗಿರುವ ಭಾರತೀಯ ಕೃಷಿರಂಗಕ್ಕೊಂದು ಹೊಸ ಆಯಾಮ ನೀಡಲು ಹೊಸ ನೀತಿ ಪೂರಕವಾಗಿದೆ. ಮುಖ್ಯವಾಗಿ ಗುತ್ತಿಗೆ ಆಧಾರಿತ ಕೃಷಿಗೆ ಆದ್ಯತೆ ನೀಡಿದಲ್ಲಿ, ರೈತರ ಫಸಲಿನ ಕಟಾವಿಗೆ ಮುನ್ನ ಅಥವಾ ಬಿತ್ತನೆಗೂ ಮುನ್ನವೇ ದರ ನಿಗದಿಗೆ ಖಾಸಗಿ ಕಂಪೆನಿಗಳು ಸಮ್ಮತಿಸುತ್ತವೆ .ಸಾಲ ಸೌಲಭ್ಯ, ಉತ್ತಮ ಗುಣಮಟ್ಟದ ಬೀಜ ಒದಗಿಸುತ್ತವೆ ಮತ್ತು ಕೃಷಿಯಲ್ಲಿ ಆಧುನೀಕರಣಕ್ಕೂ ಪೆÇ್ರೀತ್ಸಾಹಿಸುತ್ತವೆ. ಹೊಸ ನೀತಿಯಡಿ, ರೈತರು ತಮ್ಮ ಬೆಳೆಗಳನ್ನು ಹೊರರಾಜ್ಯಗಳಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಮಾರಾಟ ಮಾಡಬಹುದು. ಇದರಿಂದ ರೈತರ ಬೆಳೆಗಳಿಗೆ ಹೆಚ್ಚು ಆಕರ್ಷಕ ದರ ಸಿಗಲು ಸಾಧ್ಯ. ಜಾಸ್ತಿ ಉತ್ಪಾದನೆಯು ರಫ್ತಿನ ಜತೆ ಜತೆಗೆ ಆದಾಯ ವರ್ಧನೆಗೂ ರಹದಾರಿ ಎನ್ನುತ್ತಾರೆ ಉದ್ದಿಮೆ ತಜ್ಞರು ಮತ್ತು ವಿಶ್ಲೇಷಕರು. ಖಾಸಗಿ ರಂಗಗಳ ಪ್ರವೇಶವಾದಲ್ಲಿ ಭಾರತೀಯ ಕೃಷಿ ರಂಗದ ಪೂರೈಕೆ ವ್ಯವಸ್ಥೆ ಮತ್ತು ಮೂಲಸೌಕರ್ಯ ವ್ಯವಸ್ಥೆಯಲ್ಲೂ ಗಮನಾರ್ಹ ಸುಧಾರಣೆಗಳಾಗಲಿವೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ತಿದ್ದುಪಡಿಗಳಿಗೆ ಮುನ್ನ, ಕೃಷಿಕರು ತಮ್ಮ ಉತ್ಪನ್ನಗಳನ್ನು ಸರಕಾರೀ ಹಿಡಿತದ ರಖಂ ಮಾರುಕಟ್ಟೆ ಹೊರತು ಬೇರೆ ಮಾರುಕಟ್ಟೆಗಳಲ್ಲಿ ಮಾರುವಂತಿರಲಿಲ್ಲ. ಈ ವಿಚಾರದಲ್ಲಿ ಬೇರೆ ರಾಜ್ಯಗಳಿಗೆ ಸಾಗಿಸಲು ಮತ್ತು ಮಾರಾಟ ಮಾಡುವುದಕ್ಕೆ ತುಂಬು ನಿರ್ಬಂಧವಿತ್ತು.ಆದರೆ ಪ್ರಧಾನಿ ಮೋದಿಯವರ ಪರಿಷ್ಕøತ ಕಾಯಿದೆಗಳು ಈ ನಿರ್ಬಂಧಗಳನ್ನು ರದ್ದುಪಡಿಸಿವೆ.
ಪ್ರಗತಿಗೆ ವೇದಿಕೆ
ಜಗತ್ತಿನ ಬೃಹತ್ ಹಾಲುತ್ಪಾದಕ ರಾಷ್ಟ್ರವೆಂಬ ಹೆಗ್ಗಳಿಕೆ ಈಗಾಗಲೆ ಭಾರತಕ್ಕಿದೆ. ಭತ್ತ, ಗೋ ಮತ್ತು ಕೆಲವೊಂದು ಹಣ್ಣು ತರಕಾರಿ ರಂಗದಲ್ಲೂ ಭಾರತಕ್ಕೆ ವಿಶ್ವದಲ್ಲೇ ದ್ವಿತೀಯ ಸ್ಥಾನವಿದೆ. ಹತ್ತಿ, ಅಕ್ಕಿ ಮತ್ತು ಸಕ್ಕರೆಯ ಪ್ರಮುಖ ರಫ್ತುದಾರ ರಾಷ್ಟ್ರವೆಂಬ ಹೆಗ್ಗಳಿಕೆಯೂ ಜತೆಗಿದೆ. ಹಾಗಾಗಿ ಕೇಂದ್ರ ಸರಕಾರ ರೈತರ ವಿಶ್ವಾಸವನ್ನು ಕಾಯ್ದುಕೊಂಡು ಪ್ರಸ್ತುತ ಸುಧಾರಣೆಗಳನ್ನು ಅನುಷ್ಟಾನಿಸಿದಲ್ಲಿ, ರಾಷ್ಟ್ರದ ಆಹಾರೋತ್ಪಾದನಾ ರಂಗದಲ್ಲಿ ಸಖತ್ ಪ್ರಗತಿಗೆ ವೇದಿಕೆ ತೆರೆದುಕೊಳ್ಳಲಿದೆ.
ಕನಿಷ್ಠ ಬೆಂಬಲ ಬೆಲೆ
ಪದ್ಧತಿ ಅಳಿಯಲ್ಲ
ಹೊಸ ಮಸೂದೆಗಳಿಂದಾಗಿ, ಬೆಳೆಗಳಿಗೆ ಸರಕಾರ ನೀಡುವ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯೇ ನಾಶವಾಗಲಿದೆ ಎಂಬುದಾಗಿ ಕಾಂಗ್ರೆಸ್ ಮತ್ತಿತರ ಪಕ್ಷಗಳು ನಿರಂತರ ಪ್ರಚಾರ ನಡೆಸಿದ್ದರೆ, ಪ್ರಧಾನಿ ಮೋದಿಯವರು ಇದು ಮುಂದುವರಿಯುತ್ತದೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಪಂಜಾಬ್‍ನಲ್ಲಿ ಈ ವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ಮೇಲೆ ಭಾರೀ ನಿಯಂತ್ರಣ ಹೊಂದಿದ್ದ ಅಕಾಲಿದಳ ನಾಯಕ ಸುಖ್‍ಬೀರ್ ಸಿಂಗ್ , ತನ್ನ ನಿಯಂತ್ರಣ ತಪ್ಪುತ್ತದೆ ಎಂಬ ಕಾರಣಕ್ಕೆ ರೈತರನ್ನು ಪ್ರಚೋದಿಸುತ್ತಿರುವುದಲ್ಲದೆ, ಕೇಂದ್ರದ ಎನ್‍ಡಿಎಯಿಂದಲೂ ಹೊರಬಂದಿರುವುದಿಲ್ಲಿ ಉಲ್ಲೇಖನೀಯ.ಮುಖ್ಯವಾಗಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಭಾರೀ ಮಾರುಕಟ್ಟೆ ಮಧ್ಯವರ್ತಿ ಖುಳಗಳಿಗೆ ಈ ಕಾಯ್ದೆಯಿಂದ ಹೊಡೆತ ಬೀಳುತ್ತಿದೆ ಎನ್ನಲಾಗಿದೆ.
ಆದರೆ ಯಾವ ಕಾರಣಕ್ಕೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಸರಕಾರ ಕೈಬಿಡುವುದಿಲ್ಲ.ಇದು ಮುಂದುವರೆಯುತ್ತದೆ ಮತ್ತು ಈ ಕುರಿತ ಭೀತಿ ಆಧಾರರಹಿತ ಎಂದು ಪ್ರಧಾನಿ ಮೋದಿ ಸರಕಾರ ಆಶ್ವಾಸನೆ ನೀಡಿರುವುದು ಉಲ್ಲೇಖನೀಯ.
Seen By: 70 ನವದೆಹಲಿ: ರೈತರ ಸಾಲ ಮನ್ನಾ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ಸಮಿತಿ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ [more]
Seen By: 56 ಹೊಸದಿಲ್ಲಿ : ಹತ್ರಾಸ್ ಪ್ರಕರಣ ಬಳಸಿಕೊಂಡು, ಉತ್ತರಪ್ರದೇಶ ಸರ್ಕಾರದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ಪ್ರಕರಣ ದಿನಕ್ಕೊಂದು ತಿರುವು [more]