ನವದೆಹಲಿ: ಕರ್ತಾರ್ಪುರ್ ಕಾರಿಡಾರ್ ಯೋಜನೆಯ ಶಿಲಾನ್ಯಾಸದ ಕಾರ್ಯಕ್ರಮ ನ.28ರಂದು ಪಾಕಿಸ್ತಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪಾಕ್ ನೀಡಿದ ಆಹ್ವಾನವನ್ನು ಸಚಿವೆ ನಿರಾಕರಿಸಿದ್ದಾರೆ.
ಕಾರ್ತರ್ಪುರ್ ಕಾರಿಡಾರ್ನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ತಾವೂ ಪಾಲ್ಗೊಳ್ಳುತ್ತಿಲ್ಲ ಬದಲಾಗಿ ಸಂಪುಟದ ಇಬ್ಬರು ಸಹೋದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುಷ್ಮ ಸ್ವರಾಜ್ ಅವರ ಕಚೇರಿ ತಿಳಿಸಿದೆ. ಕಾರ್ಯಕ್ರಮಕ್ಕೆ ಸುಷ್ಮಾ ಸ್ವರಾಜ್ ಬದಲಾಗಿ ಕೇಂದ್ರ ಸಚಿವರಾದ ಹರ್ಸಿಮ್ರತ್ ಕೌರ್ ಹಾಗೂ ಹರ್ದೀಪ್ ಪುರಿ ಅವರನ್ನು ಕಳುಹಿಸಿಕೊಡಲಿದೆ ಎಂದು ತಿಳಿದುಬಂದಿದೆ.
ಈ ಕುರಿತು ನವೆಂಬರ್ 28ರಂದು ನಡೆಯಲಿರುವ ಕಾರ್ತರ್ಪುರ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲು ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ರಾಜ್ಯ ಸಚಿವ ನವಜೋತ್ ಸಿಂಗ್ ಸಿಧುಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮಹಮ್ಮೂದ್ ಖುರೇಶಿ ಟ್ವೀಟ್ ಮಾಡಿದ್ದರು.
ಪಾಕ್ ಆಹ್ವಾನಕ್ಕೆ ಪತ್ರ ಮೂಲಕ ಪ್ರತಿಕ್ರಿಯಿಸಿರುವ ಸ್ವರಾಜ್ ತೆಲಂಗಾಣ ರಾಜ್ಯದ ಚುನಾವಣೆ ಬದ್ದತೆ ನಮ್ಮ ಮೇಲಿದೆ. ಹೀಗಾಗಿ ಕಾರ್ತರ್ಪುರ್ಗೆ ಪ್ರಯಾಣಿಸಲು ಸಾಧ್ಯವಾಗದು. ಪವಿತ್ರ ಗುರುದ್ವಾರದ ಕರ್ತಾರ್ಪುರ್ ಸಾಹಿಬ್ ಸೌಲಭ್ಯ ದೊರೆಯಲಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನವೆಂಬರ್ 28ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಸಚಿವರಾದ ಹರ್ಸಿಮ್ರತ್ ಕೌರ್ ಹಾಗೂ ಹರ್ದೀಪ್ ಸಿಂಗ್ ಪುರಿ ಅವರನ್ನು ಭಾರತದ ಪ್ರತಿನಿಧಿಗಳಾಗಿ ಕಳುಹಿಸಿ ಕೊಡಲಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಾಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
kartarpur corridor,Sushma Swaraj, Declines Pak Invite,2 Ministers To Go