ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರ ಸಾವು: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ

ನವದೆಹಲಿ:ಮಾ-20: ಇರಾಕ್‌ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಅವರಿಂದು ತಿಳಿಸಿದ್ದಾರೆ.

ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದ ಸುಷ್ಮಾ ಸ್ವರಾಜ್, ಇರಾಕ್‌ನ ಸಮರ ತ್ರಸ್ತ ಮೊಸುಲ್‌ನಲ್ಲಿ 2014ರಿಂದ 39 ಭಾರತೀಯರು ನಾಪತ್ತೆಯಾಗಿದ್ದು ಅವರು ಮೃತಪಟ್ಟಿರುವುದು ಅನಂತರ ದೃಢಪಟ್ಟಿತು ಎಂದುಹೇಳಿದರು.

ಮೃತ ಭಾರತೀಯರ ಕಳೇಬರಗಳನ್ನು ಪಡೆಯಲು ಸಚಿವ ವಿ ಕೆ ಸಿಂಗ್‌ ಅವರು ಇರಾಕ್‌ಗೆ ತೆರಳಲಿದ್ದಾರೆ. ಇರಾಕ್‌ನಿಂದ ಮರಳುವಾಗ ಅವರು ಮೊದಲು ಅಮೃತ್‌ಸರದಲ್ಲಿ ಇಳಿಯುವರು. ಅನಂತರದಲ್ಲಿ ಇತರ ರಾಜ್ಯಗಳಿಗೆ ತೆರಳಿ ಶವಗಳನ್ನು ಸಂಬಂಧಿತರಿಗೆ ಒಪ್ಪಿಸುವರು ಎಂದು ತಿಳಿಸಿದ್ದಾರೆ.

ಇರಾಕ್‌ ನ ಸಾಮೂಹಿಕ ಗೋರಿಗಳಲ್ಲಿದ್ದ 39 ಭಾರತೀಯರ ಶವಗಳನ್ನು ಮೇಲೆತ್ತಿ ಗುರುತಿಸುವ ಗುರುತರ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ನಡೆಸಿರುವ ಸಚಿವ ವಿ ಕೆ ಸಿಂಗ್‌ ಅವರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದು ಸ್ವರಾಜ್‌ ನುಡಿದರು.

ಮೃತ ಭಾರತೀಯ ಡಿಎನ್‌ಎ ಮಾದರಿ ಪಡೆಯಲು ನಾವು ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿರುವ ಅವರ ಕುಟುಂಬಗಳನ್ನು ಸಂಪರ್ಕಿಸಿ ಬಳಿಕ ಶವಗಳನ್ನು ಗುರುತಿಸುವುದಕ್ಕಾಗಿ ನಾವು ಅವರನ್ನು ಇರಾಕ್‌ಗೆ ಕಳುಹಿಸಿದೆವು ಎಂದು ಹೇಳಿದರು.

Parliament,Sushma Swaraj,39 Indians missing in Iraq, dead

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ