ಅಯೋಧ್ಯೆ ವಿಚಾರದಲ್ಲಿ ಹಿಂದುಗಳಿಗೆ ಅನ್ಯಾಯ: ಮೋಹನ್‌ ಭಾಗ್ವತ್

Nagpur: RSS Chief Mohan Bhagwat addresses during Balasaheb Deoras Birth Centenary function in Nagpur on Wednesday. PTI Photo(PTI12_17_2015_000123A)

ನಾಗಪುರ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ಇತ್ತೆಂಬುದು ಸಾಬೀತಾಗಿದೆ.ಇಷ್ಟಾಗಿಯೂ ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣ ಇತ್ಯರ್ಥಕ್ಕೆ ಆದ್ಯತೆ ನೀಡದಿರುವುದು ಖೇದದ ಸಂಗತಿ. ನ್ಯಾಯ ವಿಳಂಬ ಎಂದರೆ ನ್ಯಾಯ ನಿರಾಕರಣೆಗೆ ಸಮ ಎಂಬುದು ನಮ್ಮ ನ್ಯಾಯಾಂಗವೇ ಹೇಳಿರುವ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಹಿಂದುಗಳಲ್ಲಿ ನ್ಯಾಯ ನಿರಾಕರಣೆಯ ಭಾವ ಮೂಡಿದೆ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್‌ಜೀ ಭಾಗ್ವತ್ ವಿಷಾದದಿಂದ ಹೇಳಿದ್ದಾರೆ.

ಅವರು ನಾಗಪುರದಲ್ಲಿ ಜರಗಿದ ‘ಹೂಂಕಾರ್ ಸಭಾ’ದಲ್ಲಿ ಮಾತನಾಡಿದರು. ಅಯೋಧ್ಯಾ ವಿಷಯವೀಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಿಂದ ಶೀಘ್ರ ತೀರ್ಮಾನವೊಂದನ್ನು ನಿರೀಕ್ಷಿಸಲಾಗಿತ್ತು.ಯಾಕೆಂದರೆ ಅಲ್ಲಿ ಮಂದಿರ ಇದ್ದುದು ಐತಿಹಾಸಿಕವಾಗಿ ಸಾಬೀತಾಗಿದೆ.ಆದರೆ ನ್ಯಾಯಾಲಯ ಪ್ರಕರಣದ ವಿಚಾರಣೆಗೆ ಆದ್ಯತೆ ನೀಡಲಿಲ್ಲ. ನ್ಯಾಯ ವಿಳಂಬ ಎಂಬುದು ನ್ಯಾಯ ನಿರಾಕರಣೆ ಮಾಡಿದಂತೆ. ಈಗಲಾದರೂ ಸರ್ವೋಚ್ಚ ನ್ಯಾಯಾಲಯ ಆದಷ್ಟು ಶೀಘ್ರವಾಗಿ ಅಯೋಧ್ಯೆ ಕುರಿತಂತೆ ಶೀಘ್ರ ತೀರ್ಪು ನೀಡಬೇಕೆಂದು ಅವರು ಕೋರಿದರು.

ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸುವ ಕುರಿತಂತೆ ಶಾಸನವೊಂದನ್ನು ತರಲು ಸಾಧ್ಯವಾಗುವ ನಿಟ್ಟಿನಲ್ಲಿ ಆದಷ್ಟು ಬೇಗ ಕಾರ್ಯಶೀಲರಾಗಬೇಕೆಂದು ಕೇಂದ್ರ ಸರಕಾರವನ್ನು ಕೋರಿದ ಅವರು , ದೇಶದ ಜನತೆ ಈ ನಿಟ್ಟಿನಲ್ಲಿ ಒಂದಾಗಿ ಎದ್ದು ನಿಲ್ಲುವಂತೆ ಕರೆ ನೀಡಿದರು.

ಈ ನಡುವೆ , ಅಯೋಧ್ಯೆಯಲ್ಲಿ ವಿಶ್ವಹಿಂದು ಪರಿಷತ್ತಿನ ನೇತೃತ್ವದಲ್ಲಿ ನಡೆದ ಬೃಹತ್ ಧರ್ಮ ಸಭಾದಲ್ಲಿ ನಿರ್ಮೋಹಿ ಅಖಾಡದ ರಾಮ್‌ಜೀ ದಾಸ್ ಅವರು ಮುಂದಿನ ವರ್ಷದ ಆದಿಯಲ್ಲಿ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಮಂದಿರ ನಿರ್ಮಾಣದ ದಿನಾಂಕವನ್ನು ಪ್ರಕಟಿಸಲಿದ್ದೇವೆ. ಇದು ಇನ್ನು ಕೆಲವೇ ದಿನಗಳ ವಿಷಯ. ಆದ ಕಾರಣ ಎಲ್ಲರೂ ಈಗ ಸ್ವಲ್ಪ ತಾಳ್ಮೆ ವಹಿಸಬೇಕು ಎಂಬುದಾಗಿ ಹಿಂದು ಸಮಾಜ ಹಾಗೂ ಸಂತರಿಗೆ ಮನವಿ ಮಾಡಿಕೊಂಡರು.

ಹಾಗೆಯೇ ಕಾಂಗ್ರೆಸ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ವಿಳಂಬವಾಗುವಂತೆ ಮಾಡುವುದಕ್ಕಾಗಿ ಕಾಂಗ್ರೆಸ್ ಅಯೋಧ್ಯಾ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಶರಿಗೆ ಸಂಸತ್ತಿನಲ್ಲಿ ವಾಗ್ದಂಡನೆ ವಿಸಲು ಯತ್ನಿಸುವ ಮೂಲಕ ಬೆದರಿಕೆ ಒಡ್ಡಿರುವ ಆಘಾತಕಾರಿ ಅಂಶವನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೆನಪಿಸಿದ್ದು, ನಿಜವಾಗಿ ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುವವರು ಯಾರು ಎಂಬುದರ ಬಗ್ಗೆ ದೇಶದ ಚಿಂತಕರೀಗ ಧ್ವನಿ ಎತ್ತಬೇಕು ಎಂಬುದಾಗಿ ಕರೆ ನೀಡಿದರು. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಅಯೋಧ್ಯಾ ತೀರ್ಪನ್ನು ೨೦೧೯ರ ಚುನಾವಣೆ ಬಳಿಕವೇ ನೀಡಬೇಕೆಂಬುದಾಗಿ ಸುಪ್ರೀಂಕೋರ್ಟಿನ ಮೇಲೆ ಒತ್ತಡ ಹೇರಿದ್ದು, ಅನಂತರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಶರ ವಿರುದ್ಧ ವಾಗ್ದಂಡನೆ ವಿಸಲು ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Ayodhya,Ram Mandir,RSS,Mohan bhagwat

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ