ರಾಯ್ ಪುರ: ನಗರ ನಕ್ಸಲರಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಹುದೊಡ್ಡ ಉದಾಹಣೆಯಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ.
ನಗರ ನಕ್ಸಲರ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಒಂದೇ ರೀತಿಯ ಪಕ್ಷಗಳಾಗಿವೆ ಎಂದ ತಿವಾರಿ, ನಗರ ನಕ್ಸಲ್ ಕುರಿತಾಗಿ ಈಚೆಗೆ ಪಕ್ಷದ ನಾಯಕರಾದ ರಾಜ್ ಬಬ್ಬರ್ ಮತ್ತು ನವಜ್ಯೋತ್ ಸಿಂಗ್ ಸಿಧು ನೀಡಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು ಒತ್ತಾಯಿಸಿದ್ದಾರೆ.
ಒಬ್ಬ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲರು ಗಣರಾಜ್ಯೋತ್ಸವ ಪರೇಡ್ ನಿಲ್ಲಿಸಲು ಧರಣಿ ಕುಳಿತದ್ದು ವಿಪರ್ಯಾಸ, ನಕ್ಸಲರು ಕ್ರಾಂತಿಕಾರಿಗಳು ಎಂದು ವರ್ಣಿಸಿದ್ದ ಯುಪಿ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರನ್ನು ತಿವಾರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇನ್ನು ಕಾಂಗ್ರೆಸ್ ನಾಯಕ ನವಜ್ಯೋತ್ ಸಿಂಗ್ ಸಿದು, ಈಚಿನ ತಮ್ಮ ಪಾಕ್ ಭೇಟಿಯಲ್ಲಿ ಅಲ್ಲಿನ ಸೇನಾ ಮುಖ್ಯಸ್ಥನ್ನು ಆಲಂಗಿಸಿದ್ದು ದೊಡ್ಡ ದುರಂತ. ಇವರೆಲ್ಲರೂ ಅರ್ಬನ್ ನಕ್ಸಲ್ ರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
urben naxals,BJP,manoj tiwari