ಐಜ್ವಾಲ್: :ಮಿಜೋರಾಂ ವಿಧಾನಸಭೆಯ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಹಿಫಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಉಪ ಸ್ಪೀಕರ್ ಆರ್ ಲಲ್ರಿನಾವಾಮಾ ಅವರಿಗೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸುವಾಗ ಹಿರಿಯ ಬಿಜೆಪಿ ನಾಯಕ ಎನ್ ಡಿ ಚಕ್ಮ ಹಾಗೂ ಕೊನ್ಹ್ರೆಸ್ಸ್ ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.
ಬಿಜೆಪಿ ನಾಯಕರು ಮತ್ತು 81 ವರ್ಷದ ಹಿರಿಯ ರಾಜಕಾರಣಿ ಹಿಫಿ ನಡುವೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳು ಹಿಫಿಯವರ ರಾಜೀನಾಮೆ ಮೂಲಕ ಅಂತ್ಯಗೊಂಡಿದೆ. ಹಿಫಿ ಮಿಜೋರಂನ ಮಾರಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಸಿಯಾ ಜಿಲ್ಲೆಯ ಪಾಲಕ್ ವಿಧಾನಸಭೆ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಹಿಫಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹಿಫಿಯವರ ರಾಜೀನಾಮೆಯಿಂದ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾದಂತಾಗಿದೆ.
Mizoram, Speaker, Hiphei, Resign, join BJP