ಬೆಂಗಳೂರು:ಆ-7: ಬೆಂಗಳೂರು ಅಭಿವೃದ್ಧಿ ಹಾಗೂ ಹೊಸ ಯೋಜನೆಗಳಿಗೆ ನೂತನ ಟೆಕ್ನಾಲಜಿ ಬಳಕೆ ಇತ್ಯಾದಿ ವಿಚಾರಗಳ ಬಗ್ಗೆ ಜರ್ಮನಿ ಪ್ರತಿನಿಧಿಗಳು ಇಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಜರ್ಮನಿ ಪ್ರತಿನಿಧಿಗಳಾದ ಪೊಲಿಟಿಕಲ್ ಆ್ಯಂಡ್ ಕಾರ್ಪೋರೇಟ್ ಅಫೇರ್ಸ್ನ ಅಡೈಸರ್ ಅಂಬಿಕ ಬನೋತ್ರ ಹಾಗೂ ಫೆಡರಲ್ ಪಬ್ಲಿಕ್ ಆಫ್ ಜನರಲ್ನ ಕಾನ್ಸುಲೇಟ್ ಜನರಲ್ ಮಾರ್ಗಿಟ್ ಹೆಲ್ವಿಗ್ ಅವರು ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದರು.
ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ, ಬೆಂಗಳೂರಿನಲ್ಲಿ ಪ್ರಮುಖ ಸಮಸ್ಯೆ ಎಂದರೆ ಟ್ರಾಫಿಕ್, ಕಸ ಹಾಗೂ ರಸ್ತೆ ಕಾಮಗಾರಿಗಳು. ಗುಂಡಿ ಬೀಳದಂಥ ರಸ್ತೆ ನಿರ್ಮಾಣಕ್ಕೆ ಈಗಾಗಲೇ ವೈಟ್ಟಾಪಿಂಗ್ ಮಾಡಿಸಲಾಗುತ್ತಿದೆ. ಈ ರಸ್ತೆ 25 ವರ್ಷಕ್ಕೂ ಹೆಚ್ಚು ವರ್ಷ ಬಾಳಿಕೆ ಬರಲಿದೆ. ಅದೇ ರೀತಿ ಟ್ರಾಫಿಕ್ ನಿಯಂತ್ರಣಕ್ಕೂ ಕೇಂದ್ರ ರಚಿಸಿದ್ದೇವೆ. ಆದರೂ ಇನ್ನಷ್ಟು ಪ್ರಭಲವಾದ ಯೋಜನೆ ತರಲು ಉದ್ದೇಶಿಸಿದ್ದೇವೆ ಎಂದರು. ಜರ್ಮನಿಯಲ್ಲಿನ ಅಭಿವೃದ್ಧಿ ಬಗ್ಗೆ ನಮ್ಮತಂಡ ಆಗಮಿಸಿ ಅಧ್ಯಯನ ಮಾಡಲಿದೆ ಎಂದರು.
DCM G Parameshwar,Meet,Germany representatives,Ambika Banotra,General Margit Helvig