ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಭಾಷಣಕ್ಕಾಗಿ ಸಲಹೆ ಕೇಳಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಮುಂಬರುವ ಆಗಸ್ಚ್ 15ರಂದು ನಡೆಯಲಿರುವ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಮ್ಮ ಭಾಷಣಕ್ಕಾಗಿ ಪ್ರಧಾನಿ ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ್ದಾರೆ.

ಈ  ಬಗ್ಗೆ ಇಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಆಗಸ್ಟ್ 15ರ ಸ್ವಾತಂತ್ರ್ಯೋತ್ವ ದಿನಾಚರಣೆ ಭಾಷಣಕ್ಕಾಗಿ ನಿಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.  ಅಂತೆಯೇ ಸಾರ್ವಜನಿಕರ ಸಲಹೆ ಮತ್ತು ಚರ್ಚೆಗೆ ನಮೋ ಆ್ಯಪ್ ನಲ್ಲಿ ವೇದಿಕೆ ಕಲ್ಪಿಸಲಾಗಿದೆ. ಅಲ್ಲಿ ಸಾರ್ವಜನಿಕರು ತಮ್ಮ ಹಂಚಿಕೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ.

ಇನ್ನು ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಕೇವಲ 56 ನಿಮಿಷಗಳ ಚಿಕ್ಕ ಭಾಷಣ ಮಾಡಿದ್ದರು. 2016ರಲ್ಲಿ ಅತ್ಯಂತ  ಸುಧೀರ್ಘ ಅಂದರೆ ಒಟ್ಟು 96 ನಿಮಿಷಗಳ ಭಾಷಣ ಮಾಡಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ