ಜೀವ ಇರೋ ವರೆಗೂ ರಾಜ್ಯ ಇಬ್ಬಾಗವಾಗಲು ಬಿಡುವುದಿಲ್ಲ: ಬಿಎಸ್ ವೈ

ಹುಬ್ಬಳ್ಳಿ: ಕರ್ನಾಟಕ ಏಕೀಕರಣ ಆದ ಮೇಲೆ ಈ ರೀತಿ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಯಾವ ಮುಖ್ಯಮಂತ್ರಿ ಮಾಡಿರಲಿಲ್ಲ. ಕುಮಾರಸ್ವಾಮಿ ಒಡೆದಾಳುವ ನೀತಿಯನ್ನ ಅನುಸರಿಸಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡ್ರ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಒಂದು ಶಬ್ದ ಮಾತನಾಡುವುದಿಲ್ಲ. ಇನ್ನೂ, ಬೆಳಗಾವಿಯಲ್ಲಿ ಮಠಾಧೀಶರು, ಸ್ವಾಮಿಜಿಯವರು ಪ್ರತ್ಯೇಕ ರಾಜ್ಯಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಸ್ಥಳಕ್ಕೆ ಬಂದು ಅವರ ಮನವೊಲಿಸಲು ಪ್ರಯತ್ನ ಮಾಡಬೇಕು. ಈಡಿ ರಾಜ್ಯಕ್ಕೆ ಅನ್ನ ಕೊಡುತ್ತಿರುವುದು ಉತ್ತರ ಕರ್ನಾಟಕ. ಈಡಿ ಕರ್ನಾಟಕಕ್ಕೆ ಬೆಳಕು ನೀಡುವುದು ಕಾರವಾರ.
ಅಲ್ಲದೇ ಬಜೆಟ್ ನಲ್ಲಿ ಆಲಮಟ್ಟಿ ನೀರಾವರಿ ಯೋಜನೆ ಬಗ್ಗೆ ನೈಯಾ ಪೈಸೆ ತೆಗೆದು ಇಟ್ಟಿಲ್ಲಾ. ಈ ಹಿಂದೆ ನೀರಾವರಿ ಯೋಜನೆಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಹೈದ್ರಾಬಾದ್ ಕರ್ನಾಟಕದಲ್ಲಿ ಸಾಕಷ್ಟು ಹುದ್ದೆ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಇವರು ಮನಸ್ಸು ಮಾಡಿಲ್ಲಾ. ಆಲಮಟ್ಟಿ ಉದ್ಯಾನವನವನ್ನ ಅಭಿವೃದ್ಧಿ ಮಾಡಿಲ್ಲ ಎಂದ ಅವರು, ಕೇವಲ ಕೆಆರ್‌ಎಸ್ ಅಭಿವೃದ್ಧಿ ಮಾಡಿದ್ದಾರೆ ಎಂದು ಬಿಎಸ್ ವೈ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಬೆಳಗಾವಿ ಸುವರ್ಣ ಸೌಧದ ಮುಂದೆ ನಡೆಯುತ್ತಿರುವ ಪ್ರತಿಭಟನಾಕಾರರಲ್ಲಿ ಮನವಿ ಮಾಡುತ್ತೆನೆ. ಹೋರಾಟ ಮಾಡುವುದು ತಪ್ಪಲ್ಲ. ನಾವು ಬದುಕಿರುವವರೆಗೂ ರಾಜ್ಯವನ್ನ ಇಬ್ಬಾಗ ಮಾಡಲು ಬಿಡುವುದಿಲ್ಲ ಎಂದರು. ರಾಜಕೀಯ ಸ್ವಾರ್ಥಕ್ಕಾಗಿ ಒಡೆದಾಳುವ ನೀತಿ ಮಾಡುತಿದ್ದಾರೆ. ಈ ರಾಜ್ಯದ ಸಿ ಎಮ್ ಮಾಡಬೇಕಾದ ಕೆಲಸವನ್ನು ನಾ ಮಾಡುತ್ತಿರುವೆ ಎಂದ್ರು. ಪ್ರತ್ಯೇಕ ರಾಜ್ಯದ ಹಿಂದೆ, ಬಿಜೆಪಿ ಕುಮ್ಮಕ್ಕು ಇದೆ ಎಂಬ ಪ್ರಶ್ನೆಗೆ ಕೆಂಡಾಮಂಡಲರಾದ ಬಿಎಸ್ ವೈ’ ಯಾರೋ ತೆಲೆ ತಿರುಕ ಹೇಳಿದ್ದಾನೆ ಎಂದು ತಮ್ಮ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ