ಸೆಂಟ್ ಪೀಟರ್ಸ್ ಬರ್ಗ್ : ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಫೀಫಾ ವಿಶ್ವಕಪ್ 2018 ಪುಟ್ಬಾಲ್ ಟೂರ್ನಿಯ 16 ರ ಘಟ್ಟದಲ್ಲಿ 1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಸಿದ ಸ್ವಿಡನ್ , ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.ಪಂದ್ಯ ಆರಂಭಗೊಂಡ ಮೊದಲಾರ್ಧ ಯಾವುದೇ ತಂಡ ಗೋಲು ಗಳಿಸುವಲ್ಲಿ ವಿಫಲಗೊಂಡವು. ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಕಂಡುಬಂದಿತ್ತು. ಆದರೆ, 66 ನೇ ನಿಮಿಷದಲ್ಲಿ ಪೊರ್ಸ್ ಬರ್ಗ್ ಗೋಲು ಗಳಿಸುವ ಮೂಲಕ ಸ್ವಿಡನ್ ಗೆಲ್ಲಲು ನೆರವಾದರು.ಪೊರ್ಸ್ ಬರ್ಗ್ ಸಿಡಿಸಿದ ಗೋಲು ತಡೆಯುವಲ್ಲಿ ಸ್ವಿಟ್ಜರ್ಲ್ಯಾಂಡ್ ಗೋಲುಕೀಪರ್ ಯನ್ ಸೊಮ್ಮರ್ ವಿಫಲರಾದ್ದರಿಂದ ಸ್ವಿಡನ್ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೆ, ಸ್ವಿಟ್ಜರ್ಲ್ಯಾಂಡ್ ಸೋತು ನಿರಾಸೆ ಅನುಭವಿಸಿತು.ಪಂದ್ಯದ ಮೊದಲಾರ್ಧದಲ್ಲಿ ಸ್ವಿಟ್ಜರ್ಲ್ಯಾಂಡ್ ಉತ್ತಮ ಅವಕಾಶ ಹೊಂದಿತ್ತು, ಆದರೆ, ಗೋಲುಕೀಪರ್ ಯನ್ ಸೊಮ್ಮರ್ ಚೆಂಡು ರಕ್ಷಣೆ ಮಾಡುವಲ್ಲಿ ವಿಫಲಗೊಂಡರಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಗೆ ಶರಣಾಗಬೇಕಾಯಿತು.ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಥವಾ ಕೊಲಂಬಿಯಾ ವಿರುದ್ಧ ಸ್ವಿಡನ್ ಸೆಣಸಾಟ ನಡೆಸಲಿದೆ.
Related Articles
ಫೀಫಾ ವಿಶ್ವಕಪ್ 2018: ಫುಟ್ಬಾಲ್ ನಲ್ಲಿ ಹೀಗೂ ಮಾಡಬಹುದಾ?
Seen By: 53 ಮಾಸ್ಕೋ: ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ಕೈಯಲ್ಲಿರುವ ಚೆಂಡನ್ನು ಕಸಿಯುವುದು ನಿಯಮ ಬಾಹಿರವೇ ಅಥವಾ ಇದೂ ಕ್ರೀಡೆಯ ಒಂದು ಭಾಗವೇ…! ಜಗತ್ತಿನ ಅತೀ [more]
ಸ್ಪೇನ್ ವಿರುದ್ಧ ರಷ್ಯಾ ಗೆಲುವು, ಕ್ವಾರ್ಟರ್ ಫೈನಲ್ ಪ್ರವೇಶ
Seen By: 129 ರಷ್ಯಾ : ಮಾಸ್ಕೋದಲ್ಲಿ ನಡೆದ ಫೀಫಾ ವಿಶ್ವಕಪ್ ಪುಟ್ಬಾಲ್ 16 ರ ಘಟ್ಟದ ಪಂದ್ಯದಲ್ಲಿ ಅತಿಥೇಯ ರಷ್ಯಾ 4-3 ಪೆನಾಲ್ಟಿ ಮೂಲಕ ಸ್ಪೇನ್ [more]
ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ತಮಿಳುನಾಡಿನ 11 ವರ್ಷದ ಬಾಲಕಿ
June 23, 2018
VD
ಕ್ರೀಡೆ
Comments Off on ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ತಮಿಳುನಾಡಿನ 11 ವರ್ಷದ ಬಾಲಕಿ
Seen By: 267 ಸೋಚಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2018ರಲ್ಲಿ ತಮಿಳುನಾಡಿನ 11 ವರ್ಷದ ಬಾಲಕಿಯೊಬ್ಬಳು ಇತಿಹಾಸ ನಿರ್ಮಿಸಿದ್ದಾಳೆ. ತಮಿಳುನಾಡಿನ ಬಾಲಕಿ ನಥಾನಿಕಾ ಜಾನ್ ಕೆ [more]