‘ಪೆನಾಲ್ಟಿ’ ಕಟ್ಟಿದ ದಕ್ಷಿಣ ಕೊರಿಯಾ: ಗೆಲುವಿನ ನಗೆ ಬೀರಿದ ಸ್ವೀಡನ್‌

ನಿಜ್ನೆ ನೊವ್ಗೊರೊಡ್‌: ಜಾಗತಿಕ ಫುಟ್ಬಾಲ್‌ ರಂಗದಲ್ಲಿ ಭಾರಿ ಮಿಂಚುತ್ತಿರುವ ದಕ್ಷಿಣ ಕೊರಿಯಾ ವಿರುದ್ಧ ಬಲಿಷ್ಠ ಸ್ವೀಡನ್‌ ತಂಡ ಗೆಲುವು ಸಾಧಿಸಿದೆ.
ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಫುಟ್ಬಾಲ್‌ ಪಂದ್ಯದ ಎಫ್‌ ಗುಂಪಿನ ಪಂದ್ಯದಲ್ಲಿ ಸ್ವೀಡನ್‌ ತಂಡ ದಕ್ಷಿಣ ಕೊರಿಯಾ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.
ಉಭಯ ತಂಡಗಳು ಪ್ರತಿ ಕ್ಷಣದಲ್ಲೂ ಭಾರಿ ಪೈಪೋಟಿ ನೀಡಿದವು. ನಾ ಮುಂದು ತಾ ಮುಂದು ಎಂಬಂತೆ ಗೋಲು ಗಳಿಸಲು ಹಲವಾರು ಬಾರಿ ಪ್ರಯತ್ನಿಸಿದವು.
ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಎಸಗಿದ ಒಂದೇ ಒಂದು ತಪ್ಪಿನಿಂದಾಗಿ ಪಂದ್ಯ ಕೈತಪ್ಪಿತು.
ಪಂದ್ಯದ 65 ನೇ ನಿಮಿಷದಲ್ಲಿ ಕೊರಿಯಾ ತಂಡದ ಆಟಗಾರ ವಿಕ್ಟರ್‌ ಕ್ಲಾಸನ್‌ ಅವರನ್ನು ಬೀಳಿಸಿದ್ದರಿಂದ ಸ್ವೀಡನ್‌ಗೆ ಪೆನಾಲ್ಟಿ ಕಿಕ್‌ ದಕ್ಕಿತು. ಆಂಡ್ರೆಸ್‌ ಗ್ಯಾನ್‌ಕ್ವಿಸ್ಟ್ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
ತಂಡಕ್ಕೆ ದಕ್ಕಿದ 1-0 ಗೋಲು ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದ ಸ್ವೀಡನ್‌ ತಂಡ ಗೆಲುವಿನ ನಗೆ ಬೀರಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ