ತೂಕ ಇಳಿಸಿಕೊಂಡ ವಿಶ್ವದ ಅತ್ಯಂತ ಭಾರದ ಬಾಲಕ!

ನವದೆಹಲಿ, ಜು.3- ವಿಶ್ವದ ಅತ್ಯಂತ ತೂಕದ ಬಾಲಕನೆಂದೇ ಖ್ಯಾತಿ ಪಡೆದಿದ್ದ ಪಶ್ಚಿಮ ದೆಹಲಿಯ ಉತ್ತರನಗರದ ಮಿಹಾರ್ ಜೈನ್ ಈಗ ಮತ್ತೆ ಸುದ್ದಿಯಾಗಿದ್ದಾನೆ. 14 ವರ್ಷದ ಮಿಹಾರ್ ಜೈನ್ ಕಳೆದ ಡಿಸೆಂಬರ್‍ನಲ್ಲಿ 237 ಕೆಜಿಯಷ್ಟು ತೂಗುವ ಮೂಲಕ ವಿಶ್ವದ ಅತ್ಯಂತ ಭಾರದ ಬಾಲಕನಾಗಿ ಗುರುತಿಸಿಕೊಂಡಿದ್ದ. ಕಳೆದ 7 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಮಿಹಾರ್ ಈಗ ತನ್ನ ತೂಕದಲ್ಲಿ 60 ಕೆಜಿಯಷ್ಟು ಇಳಿಸಿಕೊಂಡು 177 ಕೆಜಿಗೆ ಇಳಿದಿದ್ದಾನೆ ಎಂದು ಮ್ಯಾಕ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮಿಹಾರ್ ಜನಿಸಿದಾಗ 2.5 ಕೆಜಿ ಎಲ್ಲ ಮಕ್ಕಳಂತೆ ಸಹಜವಾಗಿಯೇ ಇದ್ದ. ಆದರೆ 5 ವರ್ಷಕ್ಕೆ ಬಂದಾಗ ಅವನ ತೂಕ 60-70 ಕೆಜಿ ಆದಾಗ ಪೆÇೀಷಕರಲ್ಲಿ ಆತಂಕ ಮೂಡಿತು. ಅಂದಿನಿಂದಲೇ ಪೆÇೀಷಕರು ಮಿಹಾರ್‍ನನ್ನು ವಿವಿಧ ಆಸ್ಪತ್ರೆಗೆ ತೋರಿಸಿದರೂ ಪರಿಹಾರ ಸಿಕ್ಕಿರಲಿಲ್ಲ. ಕಳೆದ ಡಿಸೆಂಬರ್‍ನಲ್ಲಿ ಮಿಹಾರ್ ಪೆÇೀಷಕರು ಆತನನ್ನು ಮ್ಯಾಕ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಿದ್ದರು.
ಚಿಕಿತ್ಸೆ ಆರಂಭಿಸಿದ ಮ್ಯಾಕ್ಸ್ ವೈದ್ಯರು ಸಹಜವಾಗಿಯೇ ಮಿಹಾರ್‍ನಲ್ಲಿ ಬೆಳೆದಿದ್ದ ಅನಗತ್ಯ ಕೊಬ್ಬಿನ ಅಂಶವನ್ನು ಕರಗಿಸಿ 40 ಕೆಜಿಗೆ ಇಳಿಸಿದ್ದರು, ನಂತರ ಕಳೆದ ಏಪ್ರಿಲ್‍ನಲ್ಲಿ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮೂಲಕ 20 ಕೆಜಿಯಷ್ಟು ಇಳಿದಿದ್ದಾನೆ. ಮಿಹಾರ್‍ಗೆ ಶಸ್ತ್ರಚಿಕಿತ್ಸೆ ಮುಂದುವರೆಸಿದರೆ ಮುಂದಿನ 3 ವರ್ಷಗಳಲ್ಲಿ ಆತನ ಭಾರವನ್ನು 100 ಕೆಜಿ ಇಳಿಸಬಹುದು ಎಂದು ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ