ನವದೆಹಲಿ:ಜೂ-28: ಸರ್ಜಿಕಲ್ ದಾಳಿಯನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ರಾಜಕೀಯಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ದೇಶಕ್ಕಾಗಿ ಸೈನಿಕರು ತಮ್ಮ ರಕ್ತ ಹಾಗೂ ಪ್ರಾಣ ಬಲಿದಾನ ಮಾಡಿದ್ದಾರೆ, ಇದನ್ನು ಬಿಜೆಪಿ ರಾಜಕೀಯಗೊಳಿಸಬಾರದು ಎಂದು ಆಗ್ರಹಿಸಿದ್ದಾರೆ.
ಸರ್ಜಿಕಲ್ ದಾಳಿಯಲ್ಲಿ ಯೋಧರು ದೇಶಕ್ಕಾಗಿ ತಮ್ಮ ಬಲಿದಾನ ಮಾಡಿದ್ದಾರೆ, ಇದನ್ನು ಮತಗಳಿಕೆಗೆ ಬಳಸಬಾರದು, ಪ್ರಧಾನಿ ಮೋದಿ ವೈಭವೀಕರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಾವಾಗ ಮೋದಿ ಸರ್ಕಾರ ವಿಫಲವಾಗುವುದೋ, ಅಮಿತ್ ಶಾ ಸೋಲು ಪ್ರಾರಂಭವಾಗುವುದೋ ಆಗೆಲ್ಲಾ ಬಿಜೆಪಿ ಸೇನೆಯ ಶೌರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ,
ಇನ್ನು ಅಟಲ್ ಬಿಹಾರ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲೂ ಸರ್ಜಿಕಲ್ ದಾಳಿ ನಡೆದಿತ್ತು ಎಂದು ಹೇಳಿದ್ದಾರೆ.
surgical strikes,Congress,Randeep Surjewala